ಬುಧವಾರ, ಫೆಬ್ರವರಿ 8, 2023
18 °C

ಪಾಕ್‌ನಲ್ಲಿ ವಿದ್ಯುತ್‌ ವ್ಯತ್ಯಯ2ನೇ ದಿನವೂ ಕಾಡಿದ ಸಮಸ್ಯೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಎಎಫ್‌ಪಿ): ಪಾಕಿಸ್ತಾನದಲ್ಲಿ ವಿದ್ಯುತ್‌ ವಿತರಣಾ ವ್ಯವಸ್ಥೆ ಸಹಜಸ್ಥಿತಿಗೆ ಮರಳಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಸತತ ಎರಡನೇ ದಿನವಾದ ಮಂಗಳವಾರವೂ ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಸಮಸ್ಯೆ ಕಾಡಿತು.

ಸೋಮವಾರ ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲದಲ್ಲಿ ದೋಷ ಕಂಡುಬಂದಿದ್ದು, ರಾತ್ರಿ ದೇಶ ದಾದ್ಯಂತ ವಿದ್ಯುತ್ ಕಡಿತ ಸಮಸ್ಯೆ ಕಾಡಿತ್ತು. ಎರಡನೇ ದಿನವೂ ಪರಿಸ್ಥಿತಿ ಹೀಗೇ ಮುಂದುವರಿಯಿತು.

ಬೆಳಿಗ್ಗೆಯಷ್ಟೇ  ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಇಂಧನ ಸಚಿವ ಖುರ್ರಂ ದಸ್ತಗೀರ್ ತಿಳಿಸಿದ್ದರು. ‘ಇನ್ನೊಂದೆಡೆ, ದೇಶದ ಜನರಿಗೆ ಆದ ಅನನುಕೂಲಕ್ಕಾಗಿ ಕ್ಷಮೆ ಕೋರುತ್ತೇನೆ’ ಎಂದು ಪ್ರಧಾನಿ ಶಹಬಾಜ್‌ ಷರೀಫ್‌ ತಿಳಿಸಿದ್ದರು.

‘ದೇಶದ 1,112 ಕೇಂದ್ರ ಗಳಲ್ಲಿ ವಿತರಣಾ ವ್ಯವಸ್ಥೆ ಸರಿಪಡಿಸಲಾಗಿದೆ ಪರಿಸ್ಥಿತಿ ಸುಧಾರಿಸಲು ಹೆಚ್ಚಿನ ಹೂಡಿಕೆ ಅಗತ್ಯ. ದಶಕಗಳಿಂದ ವಿದ್ಯುತ್‌ ವಿತರಣಾ ಜಾಲವನ್ನು ಕಡೆಗಣಿಸಲಾಗಿದೆ’ ಎಂದು ಇಂಧನ ಸಚಿವರು ತಿಳಿಸಿದ್ದರು. 

 ವಿದ್ಯುತ್‌ ಕಡಿತದಿಂದ ಸೋಮವಾರ ರಾತ್ರಿ ಕೋಟ್ಯಂತರ ಜನರು ಕಗ್ಗತ್ತಲಲ್ಲಿ ಕಳೆದಿದ್ದರು. ಔದ್ಯಮಿಕ ಕ್ಷೇತ್ರಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಷ್ಟವಾಗಿತ್ತು.

ವಿದ್ಯುತ್‌ ವ್ಯತ್ಯಯ ದಿಂದಾದ ಸಮಸ್ಯೆಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದ ಪ್ರಧಾನಿ, ಸಮಸ್ಯೆಗೆ ಕಾರಣವಾದ ಅಂಶ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಈ ವಿಷಯದಲ್ಲಿ ಹೊಣೆಗಾರಿಕೆ ನಿಗದಿಪಡಿ ಸಲಾಗುವುದು ಎಂದು ತಿಳಿಸಿದರು.

ಬೇಡಿಕೆಗಿಂತಲೂ ಉತ್ಪಾದನೆ ಕಡಿಮೆ ಇರುವುದು ಈ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು