ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಪತ್ರಕರ್ತರ ಹತ್ಯೆಗೆ ಪಾಶ್ಚಿಮಾತ್ಯರು ರೂಪಿಸಿದ್ದ ಸಂಚು ವಿಫಲ: ಪುಟಿನ್

Last Updated 25 ಏಪ್ರಿಲ್ 2022, 14:01 IST
ಅಕ್ಷರ ಗಾತ್ರ

ಮಾಸ್ಕೋ: ರಷ್ಯಾದ ಪ್ರಮುಖ ಪತ್ರಕರ್ತರೊಬ್ಬರ ಹತ್ಯೆಗೆ ಪಾಶ್ಚಿಮಾತ್ಯ ದೇಶಗಳು ರೂಪಿಸಿದ್ದ ಸಂಚನ್ನು ನಮ್ಮ ಗುಪ್ತಚರ ಸಂಸ್ಥೆ ವಿಫಲಗೊಳಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

‘ಟೆಲಿವಿಜನ್ ಪತ್ರಕರ್ತರೊಬ್ಬರ ಮೇಲೆ ದಾಳಿ ಮಾಡಿ ಹತ್ಯೆಗೆ ಮುಂದಾಗಿದ್ದ ಭಯೋತ್ಪಾದಕರ ಚಟುವಟಿಕೆಗಳನ್ನು ಇಂದು ಬೆಳಿಗ್ಗೆ ಫೆಡರಲ್ ಭದ್ರತಾ ಸಿಬ್ಬಂದಿ ವಿಫಲಗೊಳಿಸಿದೆ’ ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

‘ಭದ್ರತಾ ಸಂಸ್ಥೆಯು ಪತ್ರಕರ್ತನ ಹತ್ಯೆಯ ತಯಾರಿಯಲ್ಲಿ ತೊಡಗಿದ್ದ ಉಗ್ರರ ಹೆಡೆಮುರಿ ಕಟ್ಟಿದೆ’ಎಂದು ಅವರು ಹೇಳಿದ್ದಾರೆ.

ಉಕ್ರೇನ್‌ನ ರಾಷ್ಟ್ರೀಯವಾದಿ ಗುಂಪಿನ ಸದಸ್ಯರನ್ನು ರಷ್ಯಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಉಕ್ರೇನ್ ಗುಪ್ತಚರರ ಆದೇಶಗಳನ್ನು ಪಾಲಿಸುತ್ತಿದ್ದ ಇವರು ರಷ್ಯಾದ ಪತ್ರಕರ್ತ ವ್ಲಾಡಿಮಿರ್ ಸೊಲೊವ್ಯೇವ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಸುದ್ದಿ ಸಂಸ್ಥೆ ಹೇಳಿದೆ.

ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ಒಳಗಿನಿಂದಲೇ ನಾಶಮಾಡಲು ಯತ್ನಿಸುತ್ತಿವೆ. ಆದರೆ, ಆ ರೀತಿಯ ಯತ್ನಗಳು ವಿಫಲಗೊಳ್ಳಲಿವೆ. ರಷ್ಯಾವನ್ನು ನಾಶ ಮಾಡಲು ಈ ದಾಳಿಗಳಿಗೆ ಅಮೆರಿಕದ ಕೇಂದ್ರ ಏಜೆನ್ಸಿಗಳು ಕುಮ್ಮಕ್ಕು ನೀಡುತ್ತಿವೆ ಎಂದೂ ಅವರು ಆರೋಪಿಸಿದ್ದಾರೆ.

ರಷ್ಯಾ ಸಶಸ್ತ್ರ ಪಡೆ ವಿರುದ್ಧ ಜನರನ್ನು ಎತ್ತಿಕಟ್ಟಲು ವಿದೇಶಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಗಳನ್ನು ಪಾಶ್ಚಿಮಾತ್ಯ ದೇಶಗಳು ಬಳಸುತ್ತಿವೆ. ಅಂತಹ ಕೆಲಸಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT