ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿನ್ನ ಕರಡಿಯನ್ನೂ ಕರೆದುಕೊಂಡು ಯುದ್ಧಕ್ಕೆ ಬಾ: ಪುಟಿನ್‌ಗೆ ಎಲಾನ್ ಮಸ್ಕ್ ಸವಾಲು

Last Updated 15 ಮಾರ್ಚ್ 2022, 13:25 IST
ಅಕ್ಷರ ಗಾತ್ರ

ವಾಷಿಂಗ್ಟನ್: ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸುತ್ತಲೇ ಬಂದಿರುವ ಅಮೆರಿಕದ ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್, ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಯುದ್ಧದ ಆಹ್ವಾನ ನೀಡಿದ್ದು, ನಿನ್ನ ಕರಡಿಯನ್ನು ಕರೆದುಕೊಂಡು ಬಾ ಎಂದು ಸವಾಲು ಎಸೆದಿದ್ದಾರೆ.

ರಷ್ಯಾದ ಅಧ್ಯಕ್ಷರೊಂದಿಗೆ ಹೋರಾಡಲು ಬಯಸುವುದಾಗಿ ಟ್ವೀಟ್ ಮಾಡಿರುವ ಎಲಾನ್ ಮಸ್ಕ್ ಅವರು, ‘ನಾನು ಈ ಮೂಲಕ ವ್ಲಾಡಿಮಿರ್ ಪುಟಿನ್ ಅವರಿಗೆ ಯುದ್ಧದ ಸವಾಲು ಹಾಕುತ್ತೇನೆ’ ಎಂದು ಬರೆದುಕೊಂಡಿದ್ಧಾರೆ.

ಮಸ್ಕ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಷ್ಯಾದ ರಾಜಕಾರಣಿ ಮಿಟ್ರಿ ರೊಗೊಜಿನ್, ನೀನಿನ್ನು ಅಲ್ಪ.. ದುರ್ಬಲ ನನ್ನೊಂದಿಗೆ ಮೊದಲು ಸ್ಪರ್ಧಿಸು ಎಂದು ಟ್ವಿಟಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಎಲಾನ್ ಮಸ್ಕ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರಡಿ ಸವಾರಿ ಮಾಡುತ್ತಿರುವ ಚಿತ್ರದ ವಿರುದ್ಧ ಬೆಂಕಿ ಜ್ವಾಲೆ ಎಸೆಯುವ ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ. ‘ನೀವು ಕಠಿಣ ಸಮಾಲೋಚಕರಾಗಿದ್ದೀರಿ ಎಂದು ಭಾವಿಸುತ್ತೇನೆ! ಸರಿ, ಯುದ್ಧಕ್ಕೆ ನಿಮ್ಮ ಅಧ್ಯಕ್ಷ ಅವರಕರಡಿಯನ್ನು ಸಹ ತರಬಹುದು’ಎಂದು ಜರಿದಿದ್ದಾರೆ.

ರಷ್ಯಾದ ಫೈಟರ್‌ಗಳು ಮತ್ತು ಕ್ಷಿಪಣಿಗಳು ಉಕ್ರೇನ್ ನಗರಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದಂತೆ ತನ್ನ ಕಂಪನಿಯ ಸ್ಟಾರ್‌ಲಿಂಕ್ ಉಪಗ್ರಹಗಳ ಸಮೂಹವನ್ನು ಬಳಸಿಕೊಂಡು ಉಕ್ರೇನ್‌ನಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸಿದ ಎಲಾನ್ ಮಸ್ಕ್ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನನ್‌ಸ್ಕಿ ಅವರ ಮನವಿ ಮೇರೆಗೆ ಮತ್ತಷ್ಟು ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಟರ್ಮಿನಲ್‌ಗಳ ಸ್ಥಾಪನೆಗೆ ಎಲಾಸ್ಕ್ ಮಸ್ಕ್ ನಿರ್ಧರಿಸಿದ್ದಾರೆ.

ಬಿಲಿಯನೇರ್ ವಾಣಿಜ್ಯೋದ್ಯಮಿ(ಎಲಾನ್ ಮಸ್ಕ್) ಈ ಹಿಂದೆ ಫೆಬ್ರವರಿ 27 ರಂದು ಯುದ್ಧ ಪೀಡಿತ ಉಕ್ರೇನ್‌ಗೆ ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಒದಗಿಸಿದ್ದರು.

‘ಸ್ಟಾರ್‌ಲಿಂಕ್ ಸೇವೆಯು ಈಗ ಉಕ್ರೇನ್‌ನಲ್ಲಿ ಸಕ್ರಿಯವಾಗಿದೆ. ಸದ್ಯದಲ್ಲೇ ಇನ್ನಷ್ಟು ಟರ್ಮಿನಲ್‌ಗಳು ಬರಲಿವೆ’ಎಂದು ಟ್ವೀಟ್ ಮಾಡಿದ್ದರು. ಸ್ಟಾರ್‌ಲಿಂಕ್ ಪ್ರಸ್ತುತ 2,000 ಕ್ಕೂ ಹೆಚ್ಚು ಉಪಗ್ರಹಗಳ ಸಮೂಹವನ್ನು ಹೊಂದಿದೆ. ಇದು ಭೂಮಿಯಾದ್ಯಂತ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಫೆಬ್ರುವರಿ 24ರಂದು ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿತು. ಆಕ್ರಮಣದಿಂದ ಈವರೆಗೆ ಕನಿಷ್ಠ 596 ನಾಗರಿಕರ ಸಾವು ಸಂಭವಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಆದರೂ ನಿಜವಾದ ಸಂಖ್ಯೆ ಹೆಚ್ಚಿರಬಹುದು ಎಂದು ಹೇಳಲಾಗುತ್ತಿದೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ, 28 ಲಕ್ಷಕ್ಕೂ ಅಧಿಕ ಜನರು ಪೋಲೆಂಡ್ ಮತ್ತು ಇತರ ನೆರೆಯ ದೇಶಗಳಿಗೆ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT