ಶನಿವಾರ, ಡಿಸೆಂಬರ್ 3, 2022
27 °C

ಚೀನಾದ ಕೋವಿಡ್ ನಿಯಮಗಳ ವಿರುದ್ಧ ಜನರ ದಂಗೆ: ಏಳು ಮಂದಿ ಬಂಧನ

ಎಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಕೋವಿಡ್–19 ನಿಯಮಗಳ ವಿರುದ್ಧ ದಂಗೆ ಎದ್ದು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಏಳು ಜನರನ್ನು ಬಂಧಿಸಲಾಗಿದೆ ಎಂದು ಈಶಾನ್ಯ ಚೀನಾದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಚೀನಾದಲ್ಲಿ ಸೋಮವಾರ ಒಂದೇ ದಿನ 5,600 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಆರು ತಿಂಗಳಲ್ಲೇ ಇದು ಗರಿಷ್ಠ ಪ್ರಮಾಣವಾಗಿತ್ತು. ಹೀಗಾಗಿ ರಾಷ್ಟ್ರವ್ಯಾಪಿ ನಿರ್ಬಂಧವನ್ನೂ ಬಿಗಿಗೊಳಿಸಲಾಗಿದೆ. ಆದರೆ ಜನತೆ ಹೊಸದಾಗಿ ವಿಧಿಸಲಾದ ನಿರ್ಬಂಧದಿಂದ ರೋಸಿ ಹೋಗಿ ದಂಗೆ ಏಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮಂಗಳವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕರ ಬಂಧನದ ಕುರಿತು ಮಾಹಿತಿ ಹರಿದಾಡಿತ್ತು, ಆದರೆ ನಂತರ ದೇಶದ ಸೆನ್ಸಾರ್‌ ಅಧಿಕಾರಿಗಳು ಅದನ್ನು ಅಳಿಸಿಹಾಕುವಂತೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು