ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಯ ಧಾರ್ಮಿಕ ಮಹತ್ವಕ್ಕೆ ಮಾನ್ಯತೆ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ ಮಂಡನೆ

Last Updated 3 ನವೆಂಬರ್ 2021, 5:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಬೆಳಕಿನ ಹಬ್ಬ ದೀಪಾವಳಿಯ ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವಕ್ಕೆ ಮಾನ್ಯತೆ ನೀಡುವಂತೆ ಕೋರುವ ನಿರ್ಣಯವೊಂದನ್ನು ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಅವರು ಸಂಸತ್‌ನಲ್ಲಿ ಮಂಡಿಸಿದ್ದಾರೆ.

ಈ ನಿರ್ಣಯವನ್ನು ಮಂಡನೆ ಮಾಡಿದ ವೇಳೆ ಮಾತನಾಡಿದ ಅವರು, ‘ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ನೆಲೆಸಿರುವ ಸಿಖ್‌, ಜೈನ ಹಾಗೂ ಹಿಂದೂಗಳಿಗೆ ದೀಪಾವಳಿ ಹಬ್ಬ ಮಹತ್ವದ್ದು. ಇದು ಕೃತಜ್ಞತೆ ಸಲ್ಲಿಸುವ ಹಬ್ಬ. ಕತ್ತಲೆ ವಿರುದ್ಧ ಬೆಳಕಿನ ಹಾಗೂ ಕೆಟ್ಟತನದ ವಿರುದ್ಧ ಒಳ್ಳೆಯದರ ಜಯವನ್ನು ಸಾರುವ ಹಬ್ಬ’ ಎಂದು ಹೇಳಿದರು.

‘ದೀಪಾವಳಿಯ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವಕ್ಕೆ ಮಾನ್ಯತೆ ನೀಡಿದರೆ, ಅದು ಅಮೆರಿಕ ಹಾಗೂ ವಿಶ್ವದ ಇತರ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಗೌರವ ಸಲ್ಲಿಸಿದಂತಾಗಲಿದೆ’ ಎಂದು ಪ್ರತಿಪಾದಿಸಿದರು.

‘ಕೋವಿಡ್‌ ಪಿಡುಗಿನ ಈ ಸಂದರ್ಭದಲ್ಲಿ ಮತ್ತೊಂದು ದೀಪಾವಳಿ ಆಚರಿಸುತ್ತಿದ್ದೇವೆ. ಜಗತ್ತಿನಲ್ಲಿ ಆವರಿಸಿರುವ ಕತ್ತಲೆಯನ್ನು ಹೋಗಲಾಡಿಸುವ ಬೆಳಕು ಎಲ್ಲರ ಬಾಳನ್ನು ಬೆಳಗಲಿ. ಎಲ್ಲರೂ ಸುರಕ್ಷಿತ ಹಾಗೂ ಸಂತಸದಿಂದ ದೀಪಾವಳಿ ಆಚರಿಸಬೇಕು ಎಂದು ಕೋರುತ್ತೇನೆ. ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿ, ಆರೋಗ್ಯ ಹಾಗೂ ಶಾಂತಿಗಾಗಿ ಪ್ರಾರ್ಥಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT