ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ ಬಾಂಬ್‌ ಸ್ಫೋಟ: ಮಿಲಿಟರಿ ಬಸ್‌ನಲ್ಲಿದ್ದ 14 ಮಂದಿ ಸಾವು

Last Updated 20 ಅಕ್ಟೋಬರ್ 2021, 7:57 IST
ಅಕ್ಷರ ಗಾತ್ರ

ಡಮಾಸ್ಕಸ್‌, ಸಿರಿಯಾ: ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಬುಧವಾರ ಮುಂಜಾನೆ ಮಿಲಿಟರಿ ಬಸ್‌ವೊಂದು ಸಾಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಎರಡು ಬಾಂಬ್‌ಗಳು ಸ್ಫೋಟಗೊಂಡು 14ಮಂದಿ ಮೃತಪಟ್ಟಿದ್ದು,ಹಲವರು ಗಾಯಗೊಂಡಿದ್ದಾರೆ.

ಸೆಂಟ್ರಲ್‌ ಡೆಮಾಸ್ಕಸ್‌ನಲ್ಲಿ ಸ್ಫೋಟದಿಂದ ಸುಟ್ಟುಹೋದ ಬಸ್ಸಿನ ದೃಶ್ಯಾವಳಿಯನ್ನು ಸಿರಿಯನ್‌ ರಾಜ್ಯ ವಾಹಿನಿ ತೋರಿಸಿದೆ. ಜನರು ಕೆಲಸಕ್ಕೆ ಮತ್ತು ವಿದ್ಯಾರ್ಥಿಗಳು ಶಾಲೆಗೆ ಮಿಲಿಟರಿ ವಾಹನದಲ್ಲಿ ತೆರಳುತ್ತಿದ್ದ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ವಾಹಿನಿ ಹೇಳಿದೆ.

ಒಂದು ಕಾಲದಲ್ಲಿ ದಂಗೆಕೋರರು ಆಕ್ರಮಿಸಿದ್ದ ಉಪನಗರಗಳನ್ನು ಸರ್ಕಾರಿ ಪಡೆಗಳು ವಶಪಡಿಸಿಕೊಂಡ ನಂತರ ಇತ್ತೀಚಿನ ವರ್ಷಗಳಲ್ಲಿ ಡಮಾಸ್ಕಸ್‌ನಲ್ಲಿ ಇಂತಹ ದಾಳಿಗಳು ವಿರಳವಾಗಿದ್ದವು.

2011ರ ಮಾರ್ಚ್‌ನಲ್ಲಿ ಆರಂಭವಾದ ಸಿರಿಯಾ ಸಂಘರ್ಷದಲ್ಲಿ 3.50 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ 50 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT