ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌: ಅಮೆರಿಕ ಸೇನಾ ನೆಲೆ ಸಮೀಪ ರಾಕೆಟ್‌ ದಾಳಿ

ಒಬ್ಬರ ಸಾವು, 8 ಜನರಿಗೆ ಗಾಯ
Last Updated 16 ಫೆಬ್ರವರಿ 2021, 6:29 IST
ಅಕ್ಷರ ಗಾತ್ರ

ಬಾಗ್ದಾದ್‌: ಉತ್ತರ ಇರಾಕ್‌ನ ಇರ್ಬಿಲ್‌ ವಿಮಾನ ನಿಲ್ದಾಣದ ಬಳಿ ಇರುವ ಅಮೆರಿಕ ಪಡೆಗಳ ನೆಲೆಯನ್ನೇ ಗುರಿಯಾಗಿರಿಸಿಕೊಂಡು ಸೋಮವಾರ ರಾತ್ರಿ ರಾಕೆಟ್‌ ದಾಳಿ ನಡೆದಿದ್ದು, ಅಮೆರಿಕ ನೇತೃತ್ವದ ಮೈತ್ರಿಕೂಟದ ಗುತ್ತಿಗೆದಾರರೊಬ್ಬರು ಮೃತಪಟ್ಟಿದ್ದಾರೆ ಹಾಗೂ ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.

ಅರೆ ಸ್ವಾಯತ್ತ ಕುರ್ದಿಷ್‌ ಆಡಳಿತವಿರುವ ಈ ಪ್ರದೇಶದಲ್ಲಿಮೂರು ರಾಕೆಟ್‌ಗಳು ದಾಳಿ ನಡೆಸಿವೆ. ಇದರ ಸಮೀಪವೇ ಅಮೆರಿಕ ಪಡೆಗಳ ನೆಲೆಯೂ ಇದೆ. ಅಷ್ಟೇನೂ ಪರಿಚತವಲ್ಲದ ‘ಗಾರ್ಡಿಯನ್‌ ಆಫ್‌ ಬ್ಲಡ್‌ ಬ್ರಿಗೇಡ್‌’ ಹೆಸರಿನ ಶಿಯಾ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.

ರಾಕೆಟ್‌ ದಾಳಿಯಿಂದ ಹಲವು ಕಾರುಗಳು ಮತ್ತು ಇತರ ಆಸ್ತಿಯೂ ನಾಶವಾಗಿವೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ದಾಳಿಯನ್ನು ಇರಾಕ್‌ನ ಅಧ್ಯಕ್ಷ ಬರ್ಹಾಂ ಸಾಲೇಹ್‌ ತೀವ್ರವಾಗಿ ಖಂಡಿಸಿದ್ದಾರೆ. ಇರ್ಬಿಲ್‌ ನಿವಾಸಿಗಳು ಈ ಪ್ರದೇಶದಿಂದ ದೂರ ಇರುವಂತೆ ಹಾಗೂ ತಮ್ಮ ಮನೆಗಳಲ್ಲಿಯೇ ಉಳಿಯುವಂತೆ ಕುರ್ದಿಷ್‌ ಅಧಿಕಾರಿಗಳು ಸೂಚಿಸಿದ್ದಾರೆ.

ಐದು ತಿಂಗಳ ಬಳಿಕ ಈ ಪ್ರದೇಶದಲ್ಲಿ ನಡೆದ ಮೊದಲ ರಾಕೆಟ್‌ ದಾಳಿ ಇದು. ಇರಾಕ್‌ನಲ್ಲಿ ಇನ್ನೂ ಬೀಡು ಬಿಟ್ಟಿರುವ ಅಮೆರಿಕ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಒತ್ತಡ ಹೇರುವ ಸಲುವಾಗಿ ಇಂತಹ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT