ಶನಿವಾರ, ನವೆಂಬರ್ 26, 2022
23 °C

ಉಕ್ರೇನ್ ಪರಮಾಣು ಸ್ಥಾವರದ ಮುಖ್ಯಸ್ಥರ ಅಪಹರಣ: ರಷ್ಯಾ ವಿರುದ್ಧ ಆರೋಪ

ಎಪಿ Updated:

ಅಕ್ಷರ ಗಾತ್ರ : | |

Prajavani

ಕೀವ್‌: ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯಸ್ಥನನ್ನು ರಷ್ಯಾ ಅಪಹರಣ ಮಾಡಿದೆ ಎಂದು  ಶನಿವಾರ ಉಕ್ರೇನ್‌ ಆರೋಪಿಸಿದೆ.

ರಷ್ಯಾ ಸೇನಾಪಡೆಗಳು ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಪ್ರಧಾನ ನಿರ್ದೇಶಕ ಇಹೋರ್ ಮುರಶೋವ್ ಅವರನ್ನು ಶುಕ್ರವಾರ ಸಂಜೆ ಅಪಹರಣ ಮಾಡಿವೆ. ಅವರ ಕಾರನ್ನು ರಷ್ಯಾ ಪಡೆಗಳು ತಡೆದು, ಕಣ್ಣಿಗೆ ಬಟ್ಟೆ ಕಟ್ಟಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ಉಕ್ರೇನ್ ಸರ್ಕಾರಿ ಪರಮಾಣು ಕಂಪನಿ ಎನರ್ಗೋಟಮ್ ಆರೋಪಿಸಿದೆ.

‘ಮುಖ್ಯಸ್ಥರ ಬಂಧನವು ಉಕ್ರೇನ್ ಮತ್ತು ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸುರಕ್ಷತೆಗೆ ಅಪಾಯ ಉಂಟು ಮಾಡುತ್ತದೆ. ಮುರಶೋವ್ ಅವರನ್ನು ರಷ್ಯಾ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಎನರ್ಗೋಟಮ್ ಅಧ್ಯಕ್ಷ ಪೆಟ್ರೋ ಕೋಟಿನ್ ಆಗ್ರಹಿಸಿದರು. ಉಕ್ರೇನ್‌ ಆರೋಪಕ್ಕೆ ರಷ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು