ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿಯುಪೋಲ್ ಉಕ್ಕಿನ ಘಟಕದ ಸುತ್ತ ಕದನ ವಿರಾಮ ಘೋಷಿಸಿದ ರಷ್ಯಾ

Last Updated 25 ಏಪ್ರಿಲ್ 2022, 12:24 IST
ಅಕ್ಷರ ಗಾತ್ರ

ಮಾಸ್ಕೋ: ನಾಗರಿಕರನ್ನು ಸ್ಥಳಾಂತರಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಉಕ್ರೇನ್‌ನ ಮರಿಯುಪೋಲ್‌ನಲ್ಲಿರುವ ಅಜೋವ್‌ಸ್ಟಾಲ್ ಉಕ್ಕಿನ ಘಟಕದ ಸುತ್ತಲೂ ರಷ್ಯಾ ಸೋಮವಾರ ಕದನ ವಿರಾಮವನ್ನು ಘೋಷಿಸಿದೆ.

ರಷ್ಯಾ ಪಡೆಗಳು ‘ಏಪ್ರಿಲ್ 25, 2022 ರಂದು ಮಧ್ಯಾಹ್ನ 14:00 (ಮಾಸ್ಕೋ ಸ್ಥಳೀಯ ಕಾಲಮಾನ)ಕ್ಕೆ ಆಕ್ರಮಣವನ್ನು ನಿಲ್ಲಿಸುತ್ತದೆ. ಸೇನಾ ಪಡೆಗಳನ್ನು ದೂರಕ್ಕೆ ಕರೆದೊಯ್ಯುವ ಮೂಲಕ ನಾಗರಿಕರ ಸ್ಥಳಾಂತರವನ್ನು ಖಚಿತಪಡಿಸುತ್ತೇವೆ’ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನಾಗರಿಕರು ಸೂಚಿಸಿದ ಕಡೆಗೆ ಅವರನ್ನು ಕರೆದೊಯ್ಯಬಹುದು. ಬಿಳಿ ಬಾವುಟ ತೋರಿಸುವ ಮೂಲಕ ಉಕ್ರೇನ್ ಅಧಿಕಾರಿಗಳು ಅಜೋವ್‌ಸ್ಟಾಲ್‌ನ ಜನರ ಸ್ಥಳಾಂತರಕ್ಕೆ ಸಿದ್ಧವಿರುವುದನ್ನು ಖಚಿತಪಡಿಸಬೇಕು ಎಂದು ರಷ್ಯಾ ಹೇಳಿದೆ.

ಈ ಮಾಹಿತಿಯನ್ನು ಅಜೋವ್‌ಸ್ಟಾಲ್‌ನಲ್ಲಿರುವವರಿಗೆ ರೇಡಿಯೋ ಚಾನೆಲ್‌ಗಳ ಮೂಲಕ ಪ್ರತಿ 30 ನಿಮಿಷಗಳಿಗೊಮ್ಮೆ ತಿಳಿಸಲಾಗುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ತನ್ನ ಬೃಹತ್ ಅಜೋವ್‌ಸ್ಟಾಲ್ ಕೈಗಾರಿಕಾ ಪ್ರದೇಶವನ್ನು ಹೊರತುಪಡಿಸಿ ಆಯಕಟ್ಟಿನ ಪೂರ್ವ ಉಕ್ರೇನ್ ನಗರದ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿರುವುದಾಗಿ ರಷ್ಯಾ ಕಳೆದ ವಾರ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT