ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ‘ಸ್ಪುಟ್ನಿಕ್‌ ಲೈಟ್‌ ’ಲಸಿಕೆ ಬಿಡುಗಡೆ

Last Updated 25 ಜೂನ್ 2021, 10:44 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾವು ‘ಸ್ಪುಟ್ನಿಕ್ ಲೈಟ್‌’ ಎಂಬ ಕೋವಿಡ್‌ ಲಸಿಕೆಯ ನಾಲ್ಕನೇ ಅವತರಿಣಿಕೆಯನ್ನು ಶುಕ್ರವಾರ ಬಿಡುಗಡೆ ಮಾಡಿದೆ ಎಂದು ‘ಕೊಮ್ಮರ್‌ಸಾಂಟ್‌ ದೈನಿಕ ವರದಿಮಾಡಿದೆ.

ರಷ್ಯಾ ಈ ಮೊದಲು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿರುವ ‘ಸ್ಪುಟ್ನಿಕ್ ವಿ' ಲಸಿಕೆಯ ಮೊದಲ ಡೋಸ್‌ನ ಪರಿಷ್ಕೃತ ಲಸಿಕೆಯೇ ‘ಸ್ಪುಟ್ನಿಕ್ ಲೈಟ್'. ಸ್ಪುಟ್ನಿಕ್ ವಿ ಲಸಿಕೆಯನ್ನು 21 ದಿನಗಳ ಅಂತರದಲ್ಲಿ ಎರಡು ಡೋಸ್‌ ನೀಡಲಾಗುತ್ತಿದೆ.

ಸ್ಪುಟ್ನಿಕ್ ವಿ ಮೊದಲ ಡೋಸ್‌ನ ಉತ್ಪಾದನೆಯನ್ನು ಭಾರಿ ಪ್ರಮಾಣದಲ್ಲಿ ಮಾಡಲಾಗಿತ್ತು, ಆದರೆ ಆವಿಯಾಗುವ ಸ್ವಭಾವ ಹೊಂದಿರುವ ಎರಡನೇ ಡೋಸ್‌ ಅನ್ನು ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಲಾಗಿತ್ತು. ಸ್ಪುಟ್ನಿಕ್‌ ವಿ ಡೋಸ್‌ ಪಡೆದುಕೊಂಡವರಿಗೆ ಎರಡನೇ ಡೋಸ್‌ನ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಇದೀಗ ‘ಸ್ಪುಟ್ನಿಕ್‌ ಲೈಟ್‌’ ಲಸಿಕೆ ಅಭಿವೃದ್ಧಿಪಡಿಸಲಾಗಿದೆ.

ರ‌ಷ್ಯಾದಲ್ಲಿ ಈಚಿನ ದಿನಗಳಲ್ಲಿ ಡೆಲ್ಟಾ ರೂಪಾಂತರಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಲಸಿಕೆ ಅಭಿಯಾನವನ್ನು ತ್ವರಿತಗೊಳಿಸುವ ಒತ್ತಡದಲ್ಲಿದೆ. ಹೀಗಾಗಿ ಸ್ಪುಟ್ನಿಕ್‌ ಲೈಟ್‌ ಇದೀಗ ದೇಶಕ್ಕೆ ವರದಾನವಾಗಿ ದೊರೆತಿದೆ. ಹೊಸದಾಗಿ ಸ್ಪುಟ್ನಿಕ್‌ ಲೈಟ್‌ ಪಡೆದುಕೊಂಡವರಿಗೆ ಇನ್ನೊಂದು ಡೋಸ್‌ನ ಅಗತ್ಯ ಇರುವುದಿಲ್ಲ.

ಸುಮಾರು ಆರು ತಿಂಗಳ ಹಿಂದೆ ಸ್ಪುಟ್ನಿಕ್ ವಿ ಲಸಿಕೆ ಹಾಸಿಕಿಕೊಂಡವರಿಗೆ ಸ್ಪುಟ್ನಿಕ್‌ ಲೈಟ್ ಲಸಿಕೆ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT