ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಜಕಿಸ್ತಾನಕ್ಕೆ ಸೇನಾ ವಾಹನ ಕಳುಹಿಸಿದ ರಷ್ಯಾ

Last Updated 11 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಮಾಸ್ಕೋ: ತಜಕಿಸ್ತಾನಕ್ಕೆ 12 ಶಸ್ತ್ರಸಜ್ಜಿತ ವಾಹನಗಳು ಮತ್ತು ಸೇನಾ ಉಪಕರಣಗಳನ್ನು ಕಳುಹಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವರು ಶನಿವಾರ ತಿಳಿಸಿದ್ದಾರೆ.

ಅಫ್ಗಾನಿಸ್ತಾನದ ಜೊತೆ ಗಡಿ ಹಂಚಿಕೊಂಡಿರುವ ತಜಕಿಸ್ತಾನದ ಜೊತೆ ಸಂಬಂಧ ಗಟ್ಟಿ ಮಾಡಿಕೊಳ್ಳಲು ಈ ಮೂಲಕ ರಷ್ಯಾ ಯತ್ನಿಸಿದೆ. ಅಲ್ಲದೇ, ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯಕ್ಕೆ ಬಂದ ನಂತರ ಹಾಗೂ ಅಲ್ಲಿಂದ ಅಮೆರಿಕ ಸೇನೆ ವಾಪಸಾದ ಬಳಿಕ ತಜಕಿಸ್ತಾನದಲ್ಲಿರುವ ತನ್ನ ವಾಯುನೆಲೆಯಲ್ಲಿ ರಷ್ಯಾ ಸೇನಾ ಕಸರತ್ತು ನಡೆಸಿದೆ. ಮಧ್ಯ ಏಷ್ಯಾಕ್ಕೆ ಇಸ್ಲಾಮಿಕ್ ಉಗ್ರರು ಒಳನುಸುಳುವ ಸಾಧ್ಯತೆಗಳ ಬಗ್ಗೆ ರಷ್ಯಾ ಆತಂಕದಲ್ಲಿದೆ.

‘ತಜಕಿಸ್ತಾನದ ಗಡಿಯಲ್ಲಿ ಉಲ್ಬಣಿಸುತ್ತಿರುವ ಅಸ್ಥಿರತೆಯ ಹಿನ್ನೆಲೆಯಲ್ಲಿ, ನಮ್ಮ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಮೇಜರ್ ಜನರಲ್ ಯೆವ್ಗೆನಿ ಸಿಂಡ್ಯಾಯ್ಕಿನ್ ಹೇಳಿದ್ದಾರೆ.

ಮಹಿಳಾ ಕ್ರಿಕೆಟ್‌ಗೆ ಅವಕಾಶ?

ಸಿಡ್ನಿ: ಅಫ್ಗಾನಿಸ್ತಾನದಲ್ಲಿ ಮಹಿಳೆಯರು ಕ್ರಿಕೆಟ್ ಆಡಲು ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಅಫ್ಗಾನಿಸ್ತಾನದ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಅಜೀಜುಲ್ಲಾ ಫಜ್ಲಿ ಅವರು ಆಸ್ಟ್ರೇಲಿಯಾದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕ್ರಿಕೆಟ್ ಆಡಳಿತ ಮಂಡಳಿಯು ಕಾರ್ಯೋನ್ಮುಖವಾಗಿದೆ ಎಂದು ವಿವರಿಸಿದ ಅವರು, ಮಹಿಳಾ ತಂಡದ 25 ಸದಸ್ಯರು ಅಫ್ಗಾನ್ ತೊರೆಯದೇ ದೇಶದಲ್ಲಿ ಉಳಿಯಲು ನಿರ್ಧರಿಸಿದ್ಧಾರೆ ಎಂದರು.

‘ಮಹಿಳೆಯರಿಗೆ ಕ್ರಿಕೆಟ್ ಆಡಲು ಹೇಗೆ ಅವಕಾಶ ನೀಡಬೇಕು ಎಂಬುದರ ಕುರಿತು ನಮ್ಮ ಸ್ಪಷ್ಟವಾದ ನಿಲುವನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ’ ಎಂದಿರುವ ಅವರು, ಒಳ್ಳೆಯ ಸುದ್ದಿಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT