ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Russia–Ukraine Conflict: ಉಕ್ರೇನ್‌ ಬೆನ್ನಿಗೆ ನಿಂತ ಯುರೋಪಿಯನ್ ಕಮಿಷನ್

Last Updated 24 ಫೆಬ್ರುವರಿ 2022, 9:52 IST
ಅಕ್ಷರ ಗಾತ್ರ

ಉಕ್ರೇನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಘೋಷಿಸಿದ ರಷ್ಯಾದ ಕ್ರಮವನ್ನು ಯುರೋಪಿಯನ್ ಕಮಿಷನ್ ಖಂಡಿಸಿದೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವ್ಯಾನ್ ಡೆರ್‌ ಲೆಯೆನ್‌, ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುರೋಪಿಗೆ ಯುದ್ಧವನ್ನು ಮರಳಿ ತಂದಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

‘ಸಾರ್ವಭೌಮ, ಸ್ವತಂತ್ರ ರಾಷ್ಟ್ರವೊಂದರ ವಿರುದ್ಧ ರಷ್ಯಾದ ನಾಯಕತ್ವವು ಆಕ್ರಮಣಕಾರಿ ಕೃತ್ಯಕ್ಕೆ ಕೈಹಾಕಿದೆ. ಈ ಕೆಟ್ಟ ಸಮಯದಲ್ಲಿ, ಉಕ್ರೇನ್ ಮತ್ತು ಅದರ ಜನರೊಂದಿಗೆ ಯುರೋಪಿಯನ್ ಕಮಿಷನ್ ನಿಂತಿದೆ’ ಎಂದು ಉರ್ಸುಲಾ ವ್ಯಾನ್ ಡೆರ್‌ ಲೆಯೆನ್‌ ಹೇಳಿದ್ದಾರೆ.

‘ರಷ್ಯಾದ ಗುರಿ ಕೇವಲ ಡಾನ್‌ಬಾಸ್ ಅಥವಾ ಉಕ್ರೇನ್ ಅಲ್ಲ. ಯುರೋಪ್‌ನ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ನಿಯಮಗಳ ಮೇಲೆ ರಷ್ಯಾ ಆಕ್ರಮಣ ಮಾಡಿದೆ. ಅದಕ್ಕಾಗಿ, ನಾವು ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ’ ಎಂದು ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಉಕ್ರೇನ್ ಸೈನಿಕರಿಗೆ ಅವರು ಕರೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT