ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೋಪಿನ ಆರ್ಥಿಕತೆ ದುರ್ಬಲಗೊಳಿಸುವ ನಿರ್ಬಂಧಗಳು ರಷ್ಯಾ ವಿರುದ್ಧ ಬೇಡ: ಬೆಲ್ಜಿಯಂ

Last Updated 24 ಮಾರ್ಚ್ 2022, 16:08 IST
ಅಕ್ಷರ ಗಾತ್ರ

ಬ್ರಸ್ಸೆಲ್ಸ್:ಯುರೋಪ್ ದೇಶಗಳು ತಮ್ಮದೇ ಆರ್ಥಿಕತೆಯನ್ನು ಸಂಕಷ್ಟಕ್ಕೀಡು ಮಾಡುವಂತಹನಿರ್ಬಂಧಗಳನ್ನು ರಷ್ಯಾ ವಿರುದ್ಧ ಹೇರಲು ಮುಂದಾಗಬಾರದು ಎಂದು ಬೆಲ್ಜಿಯಂ ಪ್ರಧಾನಮಂತ್ರಿ ಅಲೆಕ್ಸಾಂಡರ್ ಡಿ ಕ್ರೂ ಗುರುವಾರ ಸಲಹೆ ನೀಡಿದ್ದಾರೆ.

'ನಿರ್ಬಂಧಗಳು ಯಾವಾಗಲೂ ನಮ್ಮ ಮೇಲೆ ಉಂಟುಮಾಡುವ ಪರಿಣಾಮಕ್ಕಿಂತ ತುಂಬಾ ಹೆಚ್ಚು ಪರಿಣಾಮಗಳನ್ನು ರಷ್ಯಾ ಮೇಲೆಉಂಟುಮಾಡುವಂತಿರಬೇಕು. ಅನವಶ್ಯಕವಾಗಿ ನಮ್ಮ ಆರ್ಥಿಕತೆಯನ್ನುದುರ್ಬಲಗೊಳಿಸುವಂತಹ ನಿರ್ಬಂಧಗಳನ್ನು ಹೇರುವುದು ನಮ್ಮ ಉದ್ದೇಶವಾಗಬಾರದು' ಎಂದುಯುರೋಪಿಯನ್ ಒಕ್ಕೂಟದ ಸಭೆಗೆ ಆಗಮಿಸಿದ ವೇಳೆ ಅವರು ಹೇಳಿದ್ದಾರೆ.

ರಷ್ಯಾ ಫೆಬ್ರುವರಿ 24ರಿಂದ ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿದೆ. ಇದನ್ನು ಖಂಡಿಸಿ ವಿಶ್ವದ ಹಲವು ರಾಷ್ಟ್ರಗಳು ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT