ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಂತ ಶಕ್ತಿಶಾಲಿ ದೇಶವೂ ದೂರದಿಂದಲೇ ನೋಡುತ್ತಿದೆ: ಉಕ್ರೇನ್‌ ಅಧ್ಯಕ್ಷ ಆಕ್ರೋಶ

Last Updated 25 ಫೆಬ್ರುವರಿ 2022, 10:49 IST
ಅಕ್ಷರ ಗಾತ್ರ

ಕೀವ್‌: ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಮೊಟಕುಗೊಳಿಸಲು ಮಾಸ್ಕೋ ಮೇಲೆ ವಿಧಿಸಲಾಗಿರುವ ನಿರ್ಬಂಧಗಳು ಸಾಕಾಗುವುದಿಲ್ಲ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಕೀವ್ ಮೇಲಿನ ರಷ್ಯಾದ ಕಾರ್ಯಾಚರಣೆಯ ನಂತರ ವಿಡಿಯೊ ಮೂಲಕ ಪ್ರತಿಕ್ರಿಯಿಸಿರುವ ಝೆಲೆನ್‌ಸ್ಕಿ, ‘ಜಗತ್ತು ಇನ್ನೂ ಉಕ್ರೇನ್‌ನಲ್ಲಿನ ಘಟನೆಗಳನ್ನು ದೂರದಿಂದ ಗಮನಿಸುತ್ತಿದೆ‘ ಎಂದು ಹೇಳಿದ್ದಾರೆ.

‘ಇಂದು(ಶುಕ್ರವಾರ) ಬೆಳಿಗ್ಗೆ, ನಾವು ನಮ್ಮ ದೇಶವನ್ನು ಏಕಾಂಗಿಯಾಗಿ ರಕ್ಷಿಸಿಕೊಳ್ಳುತ್ತಿದ್ದೇವೆ. ನಿನ್ನೆಯಂತೆಯೇ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವು(ಅಮೆರಿಕ) ದೂರದಿಂದಲೇ ನೋಡುತ್ತ ನಿಂತಿದೆ’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

‘ರಷ್ಯಾ ಮೇಲೆ ಹೇರಲಾದ ನಿರ್ಬಂಧಗಳು ಸಾಕಾಗುವುದಿಲ್ಲ. ಒಗ್ಗಟ್ಟು ಮತ್ತು ಹಲವು ಗಟ್ಟಿ ನಿರ್ಣಯಗಳ ಮೂಲಕ ರಷ್ಯಾವನ್ನು ನಮ್ಮ ದೇಶದಿಂದ ಹೊರಹಾಕಬಹುದು’ ಎಂದು ಅವರು ತಿಳಿಸಿದ್ದಾರೆ.

ಯುಕೆ, ಯುಎಸ್, ಜರ್ಮನಿ ಹಾಗೂ ಕೆನಡಾ ಸೇರಿದಂತೆ ಹಲವಾರು ದೇಶಗಳ ನಾಯಕರು ಉಕ್ರೇನ್‌ ಮೇಲಿನ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಖಂಡಿಸಿದ್ದಾರೆ.

ಜಾಗತಿಕ ಆರ್ಥಿಕತೆಯಿಂದ ಮಾಸ್ಕೋವನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ಹೊಸ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT