ಶನಿವಾರ, ಮೇ 28, 2022
22 °C

ರಷ್ಯಾ ಅಧ್ಯಕ್ಷ ಪುಟಿನ್ ಜತೆ ಮಾತುಕತೆಗೆ ಸಿದ್ಧ: ವೊಲೊಡಿಮಿರ್‌ ಝೆಲೆನ್‌ಸ್ಕಿ

ಎಪಿ Updated:

ಅಕ್ಷರ ಗಾತ್ರ : | |

ಕೀವ್: ‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ ಸಿದ್ಧ. ನಾವೊಂದು ಒಪ್ಪಂದಕ್ಕೆ ಬರಲೇಬೇಕಾಗಿದೆ. ಆದರೆ ಅದು ಯಾವುದೇ ಷರತ್ತಿಗೆ ಒಳಪಟ್ಟಿರಬಾರದು’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

ಇಟಲಿಯ ಸರ್ಕಾರಿ ಸ್ವಾಮ್ಯದ ‘ಆರ್‌ಎಐ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದಕ್ಷಿಣ ಉಕ್ರೇನ್‌ನ ಕ್ರಿಮಿಯಾವನ್ನು 2014ರಲ್ಲಿ ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು. ಕ್ರಿಮಿಯಾವನ್ನು ಯಾವುದೇ ಕಾರಣಕ್ಕೂ ರಷ್ಯಾದ ಭಾಗವೆಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಕ್ರಿಮಿಯಾ ಸ್ವಾಯತ್ತತೆ ಹೊಂದಿದೆ. ಅದಕ್ಕೆ ಅದರದ್ದೇ ಆದ ಸಂಸತ್ತಿದೆ. ಆದರೆ ಉಕ್ರೇನ್‌ನ ಒಳಗಿದೆ ಎಂದು ಅವರು ತಿಳಿಸಿದ್ದಾರೆ.

‘ನಮ್ಮ ಭೂಭಾಗವನ್ನು ಬೆಲೆ ತೆತ್ತು ಪುಟಿನ್‌ರನ್ನು ರಕ್ಷಿಸುವುದು ನಮಗೆ ಬೇಕಿಲ್ಲ. ಅದು ಅನ್ಯಾಯವಾಗುತ್ತದೆ. ನಾವು ರಷ್ಯಾದ ಮಣ್ಣಿನಲ್ಲಿಲ್ಲ. ರಷ್ಯಾದ ಸೇನೆ ನಮ್ಮ ಭೂಪ್ರದೇಶ ಬಿಟ್ಟು ತೆರಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು