ಮಾಸ್ಕೋ: ‘ರಷ್ಯಾದ ಎಲ್ -410 ವಿಮಾನವು ಭಾನುವಾರ ಟಾಟರ್ಸ್ತಾನ್ ಪ್ರದೇಶದ ಬಳಿ ದುರಂತಕ್ಕೀಡಾಗಿದೆ. ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದು, ಆರು ಜನರನ್ನು ರಕ್ಷಿಸಲಾಗಿದೆ' ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಲ್–410 ಹಗುರ ವಿಮಾನದಲ್ಲಿ ಒಟ್ಟು 22 ಜನರು ಪ್ರಯಾಣಿಸುತ್ತಿದ್ದರು ಹಾಗೂ ಸ್ಥಳೀಯ ಕಾಲಮಾನ ಬೆಳಿಗ್ಗೆ 9:23ಕ್ಕೆ ವಿಮಾನ ಪತನವಾಗಿದೆ ಎಂದು ತುರ್ತು ಸಚಿವಾಲಯ ಟೆಲಿಗ್ರಾಂ ಚಾನೆಲ್‌ನಲ್ಲಿ ತಿಳಿಸಿದೆ.
ಪತನಗೊಂಡಿರುವ ವಿಮಾನ ಅರ್ಧ ತುಂಡಾಗಿದ್ದು, ಮುಂಭಾಗ ನಜ್ಜುಗುಜ್ಜಾಗಿದೆ. ಪ್ರಾಣಾಪಾಯದಿಂದ ಪಾರಾಗಿರುವ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಮಾನ ಪ್ರಯಾಣದ ನಡುವೆ ಆಗಸದಿಂದ ಜಿಗಿಯುವ ಸಾಹಸಕ್ಕೆ ಇಲ್ಲಿನ ಪ್ಯಾರಾಚೂಟಿಂಗ್ ಕ್ಲಬ್ ಜೆಕ್ ನಿರ್ಮಿತ ಎಲ್–410 ವಿಮಾನ ವ್ಯವಸ್ಥೆ ಮಾಡಿತ್ತು.
ಇದೇ ವರ್ಷ ರಷ್ಯಾದಲ್ಲಿ ಎರಡು ಎಲ್–410 ವಿಮಾನಗಳು ಪತನಗೊಂಡು ಒಟ್ಟು ಎಂಟು ಜನ ಸಾವಿಗೀಡಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.