ಶನಿವಾರ, ಜೂನ್ 25, 2022
25 °C

ಶಾಂಘೈ: ಲಾಕ್‌ಡೌನ್‌ನಿಂದ ಬೇಸತ್ತು ಬೀದಿಗಿಳಿದ ಜನ

ಎಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಸುಮಾರು ಎರಡು ತಿಂಗಳ ಕಠಿಣ ಲಾಕ್‌ಡೌನ್‌ಗೆ ಬೇಸತ್ತಿರುವ ಚೀನಾದ ವಾಣಿಜ್ಯ ರಾಜಧಾನಿ ಶಾಂಘೈ ನಗರದ ನಿವಾಸಿಗಳು ಬೀದಿಗಿಳಿದಿದ್ದಾರೆ.

ನಿಯಮ ಉಲ್ಲಂಘಿಸಿ ತಮ್ಮ ಮನೆಗಳ ತಡೆಗೋಡೆಗಳನ್ನು ಜಿಗಿದು ಹೊರ ಬರುತ್ತಿದ್ದಾರೆ. ಇದಾದ ಮರುದಿನ ಇಲ್ಲಿನ ಜನ ಸ್ವತಂತ್ರವಾಗಿ ಓಡಾಡುತ್ತಿದ್ದಾರೆ.

ಈ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಇನ್ನೂ ಲಾಕ್‌ಡೌನ್‌ನಲ್ಲಿರುವ ಜನರು ತಾವು ಏಕೆ ಇದನ್ನೇ ಅನುಸರಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ಭಾಗದ ನಿವಾಸಿಗಳು ಆಡಳಿತದೊಂದಿಗೆ ಸಂಘರ್ಷಕ್ಕೆ ಇಳಿದು ತಮ್ಮ ನಗರದಲ್ಲಿ ಹೇರಲಾಗಿದ್ದ ನಿರ್ಬಂಧವನ್ನು ಭಾಗಶಃ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆ ಕಳೆದ ಏಳು ವಾರಗಳಿಂದ ಲಾಕ್‌ಡೌನ್‌ನಿಂದ ಹತಾಶೆಗೊಂಡ ಜನರ ಮನದ ಪ್ರತಿಬಿಂಬವಾಗಿದೆ. 2.5 ಕೋಟಿ ಜನಸಂಖ್ಯೆ ಹೊಂದಿರುವ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ದಿನನಿತ್ಯದ ಪ್ರಕರಣಗಳು ಇಳಿಕೆಯಾಗಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು