ಸಿಂಗಾಪುರ: ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರು ಪ್ರಯಾಣಿಕರಿಗೆ ಕೋವಿಡ್ 19ನ ಓಮೈಕ್ರಾನ್ ರೂಪಾಂತರ ತಳಿ ತಗುಲಿರುವುದು ಪ್ರಾಥಮಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಿಂಗಾಪುರ ಏರ್ಲೈನ್ಸ್ (ಎಸ್ಐಎ) ಎಸ್ಕ್ಯು 479 ವಿಮಾನದಲ್ಲಿ ದಕ್ಷಿಣ ಆಫ್ರಿಕಾದಿಂದ ಸಿಂಗಪುರಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರಿಗೆ ಬುಧವಾರ ನಡೆಸಲಾದ ಪರೀಕ್ಷೆಯಲ್ಲಿ ಓಮೈಕ್ರಾನ್ ಪಾಸಿಟಿವ್ ಬಂದಿದೆ ಎಂದು ಸರ್ಕಾರ ತಿಳಿಸಿದೆ.

‘ಡಿಸೆಂಬರ್ 1 ರಂದು ಸಿಂಗಾಪುರಕ್ಕೆ ಆಗಮಿಸಿದ ಕೂಡಲೇ ಇಬ್ಬರನ್ನೂ ಪ್ರತ್ಯೇಕವಾಸದಲ್ಲಿ ಇರಿಸಲಾಗಿದೆ. ಹಾಗಾಗಿ, ಬೇರೆ ಸಮುದಾಯದ ಜೊತೆ ಸಂವಹನ ನಡೆಸಿಲ್ಲ’ಎಂದು ಸಚಿವಾಲಯವನ್ನು ಉಲ್ಲೇಖಿಸಿ ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.

‘ಈ ಪ್ರಕರಣಗಳಿಂದ ಸಮುದಾಯ ಪ್ರಸರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ’ಎಂದು ಎಂಒಎಚ್ ತಿಳಿಸಿದೆ. ಜೋಹಾನ್ಸ್ಬರ್ಗ್ನಿಂದ ಆಗಮಿಸಿದ ಇಬ್ಬರು ಪ್ರಯಾಣಿಕರು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಕೇಂದ್ರದ (ಎನ್ಸಿಐಡಿ) ಪ್ರತ್ಯೇಕ ವಾರ್ಡ್ಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅದು ಹೇಳಿದೆ..

ಇಬ್ಬರೂ ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ‘ಕೆಮ್ಮು ಮತ್ತು ಗಂಟಲು ಕೆರೆತದ ಸೌಮ್ಯ ಲಕ್ಷಣಗಳನ್ನು ಅವರು ಹೊಂದಿದ್ದಾರೆ’ಎಂದು ಅದು ಹೇಳಿದೆ.

ಸೋಂಕಿತರಲ್ಲಿ ಒಬ್ಬರು 44 ವರ್ಷ ವಯಸ್ಸಿನ ಸಿಂಗಾಪುರದ ಖಾಯಂ ನಿವಾಸಿಯಾಗಿದ್ದು, ಅವರು ಮೊಜಾಂಬಿಕ್ ಮೂಲಕ ಜೋಹಾನ್ಸ್ಬರ್ಗ್ಗೆ ತೆರಳಿದ್ದರು. ನವೆಂಬರ್ 29 ರಂದು ಅವರು ಮೊಜಾಂಬಿಕಕ್ನಿಂದ ತೆರಳುವಾಗ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿತ್ತು ಎಂದು ಸಚಿವಾಲಯವು ತಿಳಿಸಿದೆ.

ಮತ್ತೊಬ್ಬರು 41 ವರ್ಷದ ಸಿಂಗಪುರದ ಮಹಿಳೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದರು. ನವೆಂಬರ್ 29ರಂದು ಜೋಹಾನ್ಸ್ಬರ್ಗ್ನಿಂದ ತೆರಳುವಾಗ ಅವರ ಕೋವಿಡ್ ವರದಿಯು ನೆಗೆಟಿವ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.