ಸೋಮವಾರ, ಏಪ್ರಿಲ್ 12, 2021
26 °C
ಅಮೆಜಾನ್‌ ವೆಬ್‌ ಸರ್ವೀಸಸ್‌ನವರು ನಡೆಸಿದ ಸಮೀಕ್ಷೆಯಿಂದ ಬಹಿರಂಗ

ಸಿಂಗಪುರಕ್ಕೆ 2025ರ ವೇಳೆಗೆ ಬೇಕು 12 ಲಕ್ಷ ಕೌಶಲಯುಕ್ತ ಡಿಜಿಟಲ್ ನೌಕರರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಗಪುರ: ‘ಸಿಂಗಪುರ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗಾಗಿ 2025ರ ವೇಳೆಗೆ  12 ಲಕ್ಷ ಕೌಶಲಯುಕ್ತ ಡಿಜಿಟಲ್‌ ನೌಕರರ ಅಗತ್ಯವಿದೆ. ಈಗ ಇಂತಹ ನೌಕರರು 22 ಲಕ್ಷ ಇದ್ದು ಮುಂದೆ ಈ ಪ್ರಮಾಣ ಶೇ 55ರಷ್ಟು ಹೆಚ್ಚಾಗಲಿದೆ‘ ಎಂದು ಅಮೆಜಾನ್‌ ವೆಬ್‌ ಸರ್ವೀಸಸ್‌ನವರು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಭವಿಷ್ಯದ ಡಿಜಿಟಲ್ ಕೌಶಲದ ಸವಾಲುಗಳು ನೌಕರರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವೆಬ್‌ ಸರ್ವೀಸಸ್ ಆಸ್ಟ್ರೇಲಿಯಾ, ಭಾರತ, ಇಂಡೊನೇಷ್ಯಾ, ಜಪಾನ್, ಸಿಂಗಪುರ ಮತ್ತು ದಕ್ಷಿಣ ಕೊರಿಯಾದಲ್ಲಿ ಸಮೀಕ್ಷೆ ನಡೆಸಿದ್ದು ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ಸಮೀಕ್ಷೆ ನಡೆಸಿದ ಆರು ರಾಷ್ಟ್ರಗಳ, 3 ಸಾವಿರ ವ್ಯಕ್ತಿಗಳ ಪೈಕಿ ಸಿಂಗಪುರದಲ್ಲಿ 543 ಮಂದಿಯನ್ನು ಸಂದರ್ಶಿಸಲಾಗಿದೆ ಎಂದು ಡಿಜಿಟಲ್ ಕೌಶಲ ವರದಿಯಲ್ಲಿ ಹೇಳಿದೆ. ಪ್ರಸ್ತುತ ಸಿಂಗಪುರದ 10 ನೌಕರರಲ್ಲಿ ಆರು ಮಂದಿ ಈಗಾಗಲೇ ಡಿಜಿಟಲ್ ಕೌಶಲವಿರುವ ಕೆಲಸಗಳಲ್ಲಿ ದುಡಿಯುತ್ತಿದ್ದಾರೆ.  ಈ ಪ‍್ರಕಾರ, ಆರು ರಾಷ್ಟ್ರಗಳ ಆರ್ಥಿಕ ಸ್ಥಿತಿಯಲ್ಲಿ ಆಸ್ಟ್ರೇಲಿಯಾ (ಶೇ 64) ಮೊದಲ ಸ್ಥಾನದಲ್ಲಿದ್ದರೆ, ಸಿಂಗಪುರ ಎರಡನೇ ಸ್ಥಾನದಲ್ಲಿದೆ.

ಸಿಂಗಪುರದಲ್ಲಿ ಐವರು ನೌಕಕರಲ್ಲಿ ಒಬ್ಬರು (ಶೇ22)  ಸುಧಾರಿತ ಡಿಜಿಟಲ್ ಕೌಶಲಗಳನ್ನು ಕಲಿಯಲು ಮುಂದಾಗುತ್ತಿದ್ದಾರೆ. ಅಧ್ಯಯನ ನಡೆಸಿದ ಆರು ದೇಶಗಳಲ್ಲಿ ಈ ತರಹದ ನೌಕರರ ಸಂಖ್ಯೆ ಹೆಚ್ಚಿದೆ. ಇಂಥ ನೌಕರರಲ್ಲಿ ದಕ್ಷಿಣ ಕೊರಿಯಾದ ಶೇ 21 ರಷ್ಟು ಮಂದಿ ಈ ರೀತಿಯ ಸುಧಾರಿತ ಡಿಜಿಟಲ್‌ ಕೌಶಲ ಕಲಿಕೆಗೆ ‌ಮುಂದಾಗಿದ್ದು, ಈ ಆರು ರಾಷ್ಟ್ರಗಳಲ್ಲಿ ಅದು ಎರಡನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು