ಬುಧವಾರ, ಏಪ್ರಿಲ್ 14, 2021
32 °C

ವಿಡಿಯೊ ಸಂವಾದದ ವೇಳೆ ವಿವಸ್ತ್ರರಾಗಿ ಕಾಣಿಸಿಕೊಂಡ ದಕ್ಷಿಣ ಆಫ್ರಿಕಾ ನಾಯಕನ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್: ಝೂಮ್ ಮೀಟಿಂಗ್‌ ವೇಳೆ ದಕ್ಷಿಣ ಆಫ್ರಿಕಾ ನಾಯಕನ ಪತ್ನಿ ವಿವಸ್ತ್ರರಾಗಿ ಕಾಣಿಸಿಕೊಂಡು ಪತಿಯನ್ನು ಪೇಚಿಗೆ ಸಿಲುಕಿಸಿದ ವಿದ್ಯಮಾನ ಇತ್ತೀಚೆಗೆ ನಡೆದಿದೆ.

ಟ್ರೆಡಿಷನಲ್ ಪಕ್ಷದ ಸದಸ್ಯ ಕ್ಸೊಲೈಲ್ ಎನ್‌ಡ್ಯೂ ಅವರು ಮಾರ್ಚ್‌ 30ರಂದು ಕೊವಿಡ್‌–19ಗೆ ಸಂಬಂಧಿಸಿದ ವಿಡಿಯೊ ಸಂವಾದದಲ್ಲಿ (ಝೂಮ್ ಮೀಟಿಂಗ್‌ನಲ್ಲಿ) ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾದ ಇತರ 23 ನಾಯಕರೂ ಹಾಜರಿದ್ದರು.

ಕೋವಿಡ್‌ ಸಾವು ತಡೆಗೆ ಸ್ಥಳೀಯ ವೈದ್ಯರ ಜತೆ ಸೇರಿ ಏನೇನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸುತ್ತಿದ್ದಾಗ ಅವರ ಪತ್ನಿ ಆಕಸ್ಮಿಕವಾಗಿ ವಿವಸ್ತ್ರರಾಗಿ ಬಂದಿದ್ದು, ಇತರರಿಗೂ ಕಾಣಿಸಿಕೊಂಡಿದ್ದಾರೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ.

ಕ್ಸೊಲೈಲ್ ಪತ್ನಿ ವಿವಸ್ತ್ರರಾಗಿ ಕಾಣಿಸಿಕೊಂಡಾಗ ಇತರರು ನಗಾಡುತ್ತಿರುವುದು ಮತ್ತು ಸಂವಾದ ಆಯೋಜಿಸಿದ್ದ ಸಮಿತಿಯ ಅಧ್ಯಕ್ಷೆ ಫೈಥ್ ಮುಥಂಬಿ ಮಧ್ಯಪ್ರವೇಶಿಸಿ ಮಾತನಾಡಿರುವುದು ವಿಡಿಯೊದಲ್ಲಿದೆ.

‘ನಿಮ್ಮ ಹಿಂದೆ ಕಾಣಿಸಿಕೊಳ್ಳುತ್ತಿರುವವರು ಸರಿಯಾಗಿ ಬಟ್ಟೆ ಧರಿಸಿಲ್ಲ. ನಮಗೆ ಎಲ್ಲವೂ ಕಾಣಿಸುತ್ತಿದೆ. ದಯವಿಟ್ಟು ಗಮನಹರಿಸಿ. ನಾವು ಮೀಟಿಂಗ್‌ನಲ್ಲಿದ್ದೇವೆ ಎಂದು ಅವರಿಗೆ ತಿಳಿಸಿ’ ಮುಥಂಬಿ ಮನವಿ ಮಾಡಿದ್ದಾರೆ. ಈ ರೀತಿ ಆಗಿರುವುದು ಇದೇ ಮೊದಲಲ್ಲ ಎಂದೂ ಅವರು ಹೇಳಿದ್ದಾರೆ.

ಅಷ್ಟರಲ್ಲಿ ಮುಜುಗರಕ್ಕೀಡಾದಂತೆ ಕಂಡುಬಂದ ಕ್ಸೊಲೈಲ್ ಬಳಿಕ ಕ್ಷಮೆ ಯಾಚಿಸಿದ್ದಾರೆ.

‘ನಾನು ಕ್ಯಾಮರಾವನ್ನೇ ಗಮನಿಸುತ್ತಿದ್ದೆ. ಈ ಝೂಮ್ ತಂತ್ರಜ್ಞಾನ ನಮಗೆ ಹೊಸದು. ಇದರ ಬಗ್ಗೆ ನಮಗೆ ಸರಿಯಾದ ತರಬೇತಿ ಇಲ್ಲ. ನಮ್ಮ ಮನೆಗಳು ಆನ್‌ಲೈನ್‌ ಮೀಟಿಂಗ್‌ಗಳ ವೇಳೆ ಖಾಸಗಿತನ ಕಾಯ್ದುಕೊಳ್ಳುವುದಕ್ಕೆ ಪೂರಕವಾಗಿಲ್ಲ. ರಾತ್ರಿ 10 ಗಂಟೆಗೆ ಮುಗಿಯಬೇಕಿದ್ದ ಸಭೆ ಮತ್ತೂ ಮುಂದುವರಿದಿದ್ದಾಗ ಸ್ನಾನಕ್ಕೆ ತೆರಳಲೆಂದು ಪತ್ನಿ ಹಿಂದಿನಿಂದ ಬಂದಿದ್ದಳು. ನಾನದನ್ನು ಗಮನಿಸಲಿಲ್ಲ. ಕ್ಷಮೆ ಇರಲಿ’ ಎಂದು ಕ್ಸೊಲೈಲ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು