ಬುಧವಾರ, ಮಾರ್ಚ್ 3, 2021
18 °C

ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಪಕ್ಷಗಳ ದೇಣಿಗೆ ನಿಯಂತ್ರಿಸಲು ಹೊಸ ಕಾಯ್ದೆ

ಪಿಟಿಐ Updated:

ಅಕ್ಷರ ಗಾತ್ರ : | |

ಜೋಹಾನ್ಸ್‌ಬರ್ಗ್‌: ರಾಜಕೀಯ ಪಕ್ಷಗಳಿಗೆ ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಬರುವ ದೇಣಿಗೆಯನ್ನು ನಿಯಂತ್ರಿಸಲು ಹೊಸ ಕಾಯ್ದೆಯೊಂದಕ್ಕೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸಾ ಸಹಿ ಹಾಕಿದ್ದಾರೆ.

‘ರಾಜಕೀಯ ಪಕ್ಷದ ಧನಸಹಾಯ ಕಾಯ್ದೆಗೆ ರಾಮಫೋಸ್‌ ಅವರು ಸಹಿ ಹಾಕಿದ್ದು, ಈ ಕಾಯ್ದೆಯು ಇದೇ ವರ್ಷ ಏಪ್ರಿಲ್‌ 1 ರಿಂದ ಜಾರಿಗೆ ಬರಲಿದೆ. ಈ ಕಾಯ್ದೆಯಡಿ ರಾಜಕೀಯ ನಾಯಕನಿಗೆ ವೈಯಕ್ತಿಕವಾಗಿ ದೇಣಿಗೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ ಸರ್ಕಾರ, ರಾಜಕೀಯ ಪಕ್ಷಗಳಿಗೆ ಧನ ಸಹಾಯ ಮಾಡಬಹುದಾಗಿದೆ’ ಎಂದು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಈ ಕಾಯ್ದೆಯನ್ನು ದಕ್ಷಿಣ ಆಫ್ರಿಕಾದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯಲ್ಲಾದ ಐತಿಹಾಸಿಕ ಬದಲಾವಣೆ ಎಂದು ಬಣ್ಣಿಸಲಾಗುತ್ತಿದೆ. ಈ ಕಾಯ್ದೆಯಡಿ ಶಾಸಕಾಂಗ ಸಭೆ ಮತ್ತು ಸಂಸತ್‌ ಅನ್ನು ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರದಿಂದ ಹಣ ನೀಡಲಾಗುವುದು.

ಪಕ್ಷಗಳು ಮತ್ತು ದಾನಿಗಳು ದೇಣಿಗೆಯ ಬಗೆಗಿನ ಮಾಹಿತಿಯನ್ನು ಸ್ವತಂತ್ರ ಚುನಾವಣಾ ಆಯೋಗಕ್ಕೆ(ಐಇಸಿ) ಬಹಿರಂಗಪಡಿಸುವುದು ಕಡ್ಡಾಯವಾಗಿದೆ ಎಂದು ಈ ಕಾಯ್ದೆಯಲ್ಲಿ ಹೇಳಲಾಗಿದೆ.

ವಿದೇಶಿ ಸರ್ಕಾರ ಅಥವಾ ಏಜೆನ್ಸಿಗಳು, ವಿದೇಶಿಯರು, ರಾಜ್ಯ ಅಥವಾ ಸರ್ಕಾರಿ ಸ್ವಾಮ್ಯದ ಉದ್ಯಮಗಳ ವಿಭಾಗಗಳಿಂದ ದೇಣಿಗೆ ಪಡೆಯುವುದನ್ನು ಈ ಕಾಯ್ದೆಯು ನಿಷೇಧಿಸಿದೆ. ಆದರೆ ಪಕ್ಷಗಳು ತರಬೇತಿ, ಕೌಶಲ್ಯ ಅಭಿವೃದ್ಧಿಗಾಗಿ ವಿದೇಶಿ ಘಟಕಗಳಿಂದ ಹಣ ಪಡೆಯಬಹುದಾಗಿದೆ. ಈ ಕಾಯ್ದೆಯಲ್ಲಿ ಪಕ್ಷದ ಸದಸ್ಯರು ಕೇವಲ ಪಕ್ಷದ ಕಾರ್ಯಗಳಿಗಾಗಿ ದೇಣಿಗೆಯನ್ನು ಪಡೆಯಲು ಅವಕಾಶ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು