ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಸಂಕಷ್ಟ– ಹಲವು ವಸ್ತುಗಳ ಆಮದಿಗೆ ತಡೆ

Last Updated 14 ಜುಲೈ 2021, 5:34 IST
ಅಕ್ಷರ ಗಾತ್ರ

ಕೊಲಂಬೊ: ಕೋವಿಡ್‌ನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟ ಎದುರಾಗಿದ್ದು, ವಿದೇಶಿ ವಿನಿಮಯ ಮೀಸಲು ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಹೀಗಾಗಿ ಕಾರು, ಕೃಷಿ ರಾಸಾಯನಿಕಗಳು ಮಾತ್ರವಲ್ಲದೆ, ದಿನಬಳಕೆಯ ಕೆಲವು ವಸ್ತುಗಳ ಆಮದಿಗೂ ತಡೆ ಒಡ್ಡಲಾಗಿದೆ.

ಟೂತ್‌ಬ್ರಷ್‌ ಹಿಡಿ, ಸ್ಟ್ರಾಬೆರಿ, ವಿನೆಗರ್‌, ವೆಟ್‌ವೈಪ್‌, ಸಕ್ಕರೆಯಂತಹ ನೂರಾರು ವಸ್ತುಗಳ ಆಮದಿಗೆ ತಡೆ ಒಡ್ಡಲಾಗಿದ್ದು, ಗ್ರಾಹಕ ಸಾಮಗ್ರಿಗಳ ಬೆಲೆ ವಿಪರೀತವಾಗಿ ಹೆಚ್ಚಳವಾಗಿದೆ.

ಕೋವಿಡ್‌ ಪಿಡುಗು ಆರಂಭವಾಗುವುದಕ್ಕೆ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. 2019ರ ಈಸ್ಟರ್‌ ಬಾಂಬ್‌ ಸ್ಫೋಟ ಪ್ರಕರಣದ ಬಳಿಕ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಪ್ರವಾಸೋದ್ಯಮ ದೇಶದಲ್ಲಿ ಸುಮಾರು 30 ಲಕ್ಷ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಒದಗಿಸಿತ್ತು. ದೇಶದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ 5ರಷ್ಟಿತ್ತು.

ಶ್ರೀಲಂಕಾ ಈ ವರ್ಷ 3.7 ಶತಕೋಟಿ ಡಾಲರ್‌ ವಿದೇಶಿ ಸಾಲ ಮರುಪಾವತಿ ಮಾಡಬೇಕಿದ್ದು, ಇದುವರೆಗೆ ಮಾಡಿರುವುದು 1.3 ಶತಕೋಟಿ ಡಾಲರ್‌ ಮಾತ್ರ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT