ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ದಿನಕ್ಕಾಗುವಷ್ಟು ಪೆಟ್ರೋಲ್ ಮಾತ್ರ ಇದೆ: ಶ್ರೀಲಂಕಾ ನೂತನ ಪ್ರಧಾನಿ ಎಚ್ಚರಿಕೆ

Last Updated 17 ಮೇ 2022, 5:33 IST
ಅಕ್ಷರ ಗಾತ್ರ

ಕೊಲಂಬೊ: ಸದ್ಯ ದೇಶದಲ್ಲಿ ಒಂದು ದಿನಕ್ಕೆ ಆಗುವಷ್ಟು ಪೆಟ್ರೋಲ್‌ ಮಾತ್ರ ಉಳಿದಿದೆ ಎಂದು ಶ್ರೀಲಂಕಾದ ನೂತನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಸೋಮವಾರ ನಾಗರಿಕರನ್ನು ಎಚ್ಚರಿಸಿದ್ದಾರೆ.

ಆರ್ಥಿಕತೆ ಕುರಿತು ದೇಶವನ್ನು ಉದ್ದೇಶಿ ಮಾತನಾಡಿರುವ ಅವರು, ‘ಸದ್ಯಕ್ಕೆ, ನಾವು ಒಂದೇ ಒಂದು ದಿನಕ್ಕೆ ಆಗುಷ್ಟು ಪೆಟ್ರೋಲ್ ದಾಸ್ತಾನನ್ನು ಮಾತ್ರ ಹೊಂದಿದ್ದೇವೆ’ ಎಂದು ಅವರು ಹೇಳಿದರು. ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ ನೀಡಿರುವ (ಲೈನ್ ಆಫ್‌ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಡೀಸೆಲ್‌ ಪೂರೈಸಿ ನೆರವಾದ ಭಾರತಕ್ಕೆ ಧನ್ಯವಾದಗಳು. ಭಾರತದ ಪೂರೈಕೆಯಿಂದಾಗಿ ಡೀಸೆಲ್ ಕೊರತೆಯನ್ನು ನಿವಾರಿಸಲಾಗುವುದು’ ಎಂದು ಅವರು ಹೇಳಿದರು.

‘ನಿನ್ನೆ ಭಾರತದಿಂದ ಬಂದ ಡೀಸೆಲ್‌ನಿಂದಾಗಿ ಕೊರತೆ ಸ್ವಲ್ಪ ಮಟ್ಟಿಗೆ ಬಗೆಹರಿಯಲಿದೆ. ಭಾರತ ಮೇ 18 ಮತ್ತು ಜೂನ್ 1 ರಂದು ಇನ್ನೂ ಎರಡು ಹಂತಗಳಲ್ಲಿ ಡೀಸೆಲ್ ಪೂರೈಕೆ ಮಾಡಲಿದೆ. ಜೊತೆಗೆ, ಎರಡು ಹಂತಗಳಲ್ಲಿ ಪೆಟ್ರೋಲ್ ಬರಲಿದೆ. ಮೇ 18 ಮತ್ತು 29 ರಂದು ಪೆಟ್ರೋಲ್‌ ಲಭ್ಯವಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ದೇಶಕ್ಕೆ ಅಗತ್ಯವಿರುವ ಆಮದಿಗೆ ಪಾವತಿಸಲು 75 ದಶಲಕ್ಷ ಡಾಲರ್‌ (₹583 ಕೋಟಿ) ವಿದೇಶಿ ವಿನಿಮಯದ ಅಗತ್ಯವಿದೆ ಎಂದು ಅವರು ಇದೇ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT