ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಜಾಫ್ನಾದಿಂದ ಭಾರತಕ್ಕೆ ವಿಮಾನ ಸೇವೆಗೆ ಮುಂದಿನ ವಾರ ಚಾಲನೆ

Last Updated 6 ಡಿಸೆಂಬರ್ 2022, 13:46 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾದ ಜಾಫ್ನಾದಿಂದ ಚೆನ್ನೈಗೆ ವಿಮಾನಯಾನ ಸೇವೆಯನ್ನು ಮುಂದಿನ ವಾರದಿಂದ ಪುನರಾರಂಭಿಸಲು ಶ್ರೀಲಂಕಾ ನಿರ್ಧರಿಸಿದೆ ಎಂದು ಅಲ್ಲಿಯ ಹಿರಿಯ ಅಧಿಕಾರಿಯಬ್ಬರು ತಿಳಿಸಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

‘ಪಲಾಲಿಯಿಂದ ಭಾರತಕ್ಕೆ ವಿಮಾನಯಾನವು ಶೀಘ್ರದಲ್ಲಿ ಪುನರಾರಂಭವಾಗಲಿದೆ. ಡಿಸೆಂಬರ್‌ 12ರಂದು ಚಾಲನೆ ದೊರೆಯಬಹುದು’ ಎಂದು ಶ್ರೀಲಂಕಾದ ವಿಮಾನಯಾನ ಸಚಿವ ನಿಮಲ್‌ ಸಿರಿಪಾಲ ಡಿ ಸಿಲ್ವ ಅವರು ಸಂಸತ್ತಿಗೆ ತಿಳಿಸಿದ್ದಾರೆ.

ಜಾಫ್ನಾ ಮತ್ತು ಚೈನೈ ನಡುವಣ ವಿಮಾನ ಹಾರಾಟಕ್ಕೆ 2019ರ ಅಕ್ಟೋಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ಶ್ರೀಲಂಕಾ ಸರ್ಕಾರ ಬದಲಾವಣೆ ಆದ ಬಳಿಕ ಈ ಮಾರ್ಗದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ಶ್ರೀಲಂಕಾಕ್ಕೆ ವಿದೇಶಿ ಆದಾಯ ತರುವಲ್ಲಿ ಪ್ರವಾಸೋದ್ಯಮ ವಲಯಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಕೋವಿಡ್‌–19 ಸಾಂಕ್ರಾಮಿಕದ ಕಾರಣ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿತ್ತು. ಇದು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಲ್ಲೂ ಪ್ರಮುಖ ಪಾತ್ರ ಹೊಂದಿತ್ತು. ಶ್ರೀಲಂಕಾದ ಈ ನಡೆಯಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT