ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಿಂದ ದೋಣಿ ಮೂಲಕ ಮತ್ತೆ 19 ತಮಿಳರು ಭಾರತಕ್ಕೆ

Last Updated 10 ಏಪ್ರಿಲ್ 2022, 13:03 IST
ಅಕ್ಷರ ಗಾತ್ರ

ರಾಮೇಶ್ವರಂ (ಪಿಟಿಐ): ಐವರು ಮಕ್ಕಳು ಹಾಗೂ ಆರು ಮಂದಿ ಮಹಿಳೆಯರು ಸೇರಿದಂತೆ ಇನ್ನೂ 19 ಶ್ರೀಲಂಕಾ ತಮಿಳರು ದೋಣಿ ಮೂಲಕ ತಮ್ಮ ದೇಶವನ್ನು ತೊರೆದು ಭಾನುವಾರ ಬೆಳಿಗ್ಗೆ ಇಲ್ಲಿಗೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಂಕಾ ತಮಿಳರ ಗುಂಪೊಂದು ಇಲ್ಲಿಂದ ಸುಮಾರು 19 ಕಿಮೀ ದೂರದಲ್ಲಿರುವ ಧನುಷ್ಕೋಡಿಯಿಂದ ಅರಿಸಲ್ಮುನೈ ಪ್ರದೇಶವನ್ನು ಶನಿವಾರ ತಡರಾತ್ರಿ ತಲುಪಿದೆ ಎಂಬ ಮಾಹಿತಿ ಬಂದ ನಂತರ ಪೊಲೀಸ್ ಸಿಬ್ಬಂದಿ ಅವರನ್ನು ಪತ್ತೆ ಮಾಡಿ ಮಂಡಪಂನಲ್ಲಿರುವ ಪುನರ್ವಸತಿ ಶಿಬಿರಕ್ಕೆ ಕರೆದೊಯ್ದಿದ್ದಾರೆ.

‘ಶ್ರೀಲಂಕಾದ ಧನುಷ್ಕೋಡಿಯಿಂದ ದೋಣಿಯಲ್ಲಿ ಇಲ್ಲಿಗೆ ಬಂದಿದ್ದೇವೆ. ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಮನೆಗಳನ್ನು ತೊರೆದು ಇಲ್ಲಿಗೆ ಬಂದಿದ್ದೇವೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಪ್ರಸ್ತುತ ರಾಜಕೀಯ ಅಸ್ಥಿರತೆಯಿಂದ ತಮ್ಮ ಜೀವನ ನಡೆಸುವುದು ಕಷ್ಟಸಾಧ್ಯ’ ಎಂದು ದೋಣಿಯಲ್ಲಿ ಪುನರ್ವಸತಿ ಬಯಸಿ ಬಂದಿರುವ ತಮಿಳರು ಹೇಳಿದ್ದಾರೆ.

ಶ್ರೀಲಂಕಾದಿಂದ ತಮಿಳುನಾಡಿಗೆ ಈವರೆಗೆ ಒಟ್ಟು 29 ಮಂದಿ ತಮಿಳರು ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT