ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ ಪರಿಶೀಲನೆ: ವಿಶ್ವಸಂಸ್ಥೆ ಕ್ರಮಕ್ಕೆ ಇರಾನ್‌ ನಿರ್ಬಂಧ

Last Updated 23 ಫೆಬ್ರುವರಿ 2021, 9:25 IST
ಅಕ್ಷರ ಗಾತ್ರ

ಟೆಹರಾನ್‌: ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲನೆ ನಡೆಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್‌ ಕೆಲವು ನಿರ್ಬಂಧಗಳನ್ನು ಹೇರಿದೆ ಎಂದು ಸರ್ಕಾರಿ ಒಡೆತನದ ಟಿ.ವಿ ವಾಹಿನಿ ಮಂಗಳವಾರ ವರದಿ ಮಾಡಿದೆ.

ಅಮೆರಿಕ ಹಾಗೂ ಐರೋಪ್ಯ ದೇಶಗಳು ತನ್ನ ವಿರುದ್ಧ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆರವು ಮಾಡುವಂತೆ ಒತ್ತಡ ಹೇರುವ ತಂತ್ರದ ಭಾಗವಾಗಿ ಇರಾನ್‌ ಈ ರೀತಿ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಣ್ವಸ್ತ್ರಗಳ ಪರಿಶೀಲನೆಗೆ ಆಗಮಿಸುವ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಯ (ಐಎಇಎ) ಪರಿಶೀಲನಾ ತಂಡಕ್ಕೆ ಸೀಮಿತ ಅನುಮತಿ ನೀಡುವುದಾಗಿ ಸರ್ಕಾರ ಹೇಳಿದೆ. ಆದರೆ, ಈ ಸೀಮಿತ ಅನುಮತಿಯ ಸ್ವರೂಪ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದೂ ವಾಹಿನಿ ವರದಿ ಮಾಡಿದೆ.

ಅಣ್ವಸ್ತ್ರಗಳ ಪರಿಶೀಲನೆ ನಡೆಸುವ ಸಂಬಂಧ ಐಎಇಎ ಜೊತೆ ತಾನು ಮಾಡಿಕೊಂಡಿರುವ ಒಪ್ಪಂದವನ್ನು ರದ್ದು ಮಾಡುವುದಾಗಿಯೂ ಇರಾನ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT