ಶನಿವಾರ, ಅಕ್ಟೋಬರ್ 16, 2021
22 °C

ಗ್ರೀಸ್‌ನ ಕ್ರೀಟ್‌ನಲ್ಲಿ ಪ್ರಬಲ ಭೂಕಂಪ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಅಥೆನ್ಸ್: ಗ್ರೀಕ್‌ನ ಕ್ರೀಟ್ ದ್ವೀಪದಲ್ಲಿ ಮಂಗಳವಾರ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಥೆನ್ಸ್‌ನ ಭೂಕಂಪನ ಮಾಪನ ಕೇಂದ್ರವು ತಿಳಿಸಿದೆ.

ಭೂಕಂಪನದಲ್ಲಿ ಯಾವುದೇ ಸಾವು–ನೋವು ವರದಿಯಾಗಿಲ್ಲ ಎಂದು ಅಲ್ಲಿನ ಮಾಧ್ಯಮಗಳ ಪ್ರಾಥಮಿಕ ವರದಿಯು ಹೇಳಿದೆ.

ಎರಡು ವಾರಗಳ ಅಂತರದಲ್ಲಿ ಗ್ರೀಸ್‌ನ ದ್ವೀಪದಲ್ಲಿ ಆಗಿರುವ ಎರಡನೇ ಪ್ರಬಲ ಭೂಕಂಪನ ಇದಾಗಿದೆ. ಭೂಕಂಪನದ ಕೇಂದ್ರ ಬಿಂದು ಅಥೆನ್ಸ್‌ನಿಂದ 24 ಕಿ.ಮೀ. ದೂರದ ಜಾಕ್ರೊಸ್ ಎಂಬಲ್ಲಿ ಗುರುತಿಸಲಾಗಿದೆ. ಎಂದು ಭೂಕಂಪನ ಮಾಪನ ಕೇಂದ್ರವು ಮಾಹಿತಿ ನೀಡಿದೆ.

ಏಜಿಯನ್ ಸಮುದ್ರದಲ್ಲಿರುವ ಡೋಡೆಕಾನೀಸ್ ದ್ವೀಪಗಳಲ್ಲೂ ಭೂಕಂಪನದ ಅನುಭವವಾಗಿದೆ. ಆತಂಕಗೊಂಡ ನಿವಾಸಿಗಳು ಮನೆಯಿಂದ ಹೊರಗೆ ಬಂದರು. ಅಂತೆಯೇ ನೆರೆಯ ದ್ವೀಪ ಕಾರ್ಪಾಥೋಸ್‌ನಲ್ಲೂ 4.5ರಷ್ಟು ತೀವ್ರತೆಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

‘ಭೂಕಂಪದ ಕೇಂದ್ರವು ಸಮುದ್ರದಲ್ಲಿದೆ, ಜನವಸತಿ ಸ್ಥಳಗಳಿಂದ ದೂರವಿದೆ’ ಎಂದು ಗ್ರೀಕ್ ಭೂಕಂಪ ಶಾಸ್ತ್ರಜ್ಞ ಗೆರಾಸಿಮೊಸ್ ಪಾಪಾಡೋಪೌಲೋಸ್ ಅವರು ಸ್ಕೈ ರೇಡಿಯೋ ಮಾಹಿತಿ ನೀಡಿದ್ದಾರೆ.

ಗ್ರೀಕ್ ಪೊಲೀಸ್ ಭೂ ಘಟಕಗಳು ಮತ್ತು ಹೆಲಿಕಾಪ್ಟರ್‌ಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ. ಸಮುದ್ರ ತೀರಗಳಲ್ಲಿ ಸುನಾಮಿಯ ಭೀತಿ ಎದುರಾಗಿದ್ದು, ಕಡಲ ರಕ್ಷಣಾ ತಂಡವು ನಿಗಾ ವಹಿಸಿದೆ ಎಂದು ನಾಗರಿಕ ಸಂರಕ್ಷಣಾ ಸಂಸ್ಥೆಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.