ಘಾಜ್ನಿ, ಅಫ್ಗಾನಿಸ್ತಾನ: ‘ಇಲ್ಲಿನ ಸೇನಾ ನೆಲೆಯನ್ನು ಗುರಿಯಾಗಿಟ್ಟುಕೊಂಡು ನಡೆದ ಆತ್ಮಾಹುತಿ ಕಾರುಬಾಂಬ್ ದಾಳಿಯಲ್ಲಿ 31 ಯೋಧರು ಮಡಿದಿದ್ದಾರೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಕಾಬೂಲ್ನ ಝುಬಾಲ್ನಲ್ಲಿ ಫ್ರಾಂತೀಯ ಕೌನ್ಸಿಲ್ ಮುಖ್ಯಸ್ಥ ಅತ್ತಜನ್ ಹಕ್ಬಯಾತ್ ಅವರನ್ನು ಗುರಿಯಾಗಿಟ್ಟುಕೊಂಡು ನಡೆದ ಮತ್ತೊಂದು ಪ್ರತ್ಯೇಕ ಆತ್ಮಾಹುತಿ ಕಾರುಬಾಂಬ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ. ಇದರೊಂದಿಗೆ ಸತ್ತವರ ಒಟ್ಟು ಸಂಖ್ಯೆ 34ಕ್ಕೆ ಏರಿದೆ.

ಇತ್ತೀಚಿನ ದಿನಗಳಲ್ಲಿ ಅಫ್ಗಾನಿಸ್ತಾನದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಕೃತ್ಯ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಾಜ್ನಿ ನಗರದ ಹೊರವಲಯದಲ್ಲಿ ಈ ದಾಳಿ ನಡೆದಿದೆ. ಈ ಭಾಗದಲ್ಲಿ ಭದ್ರತಾ ಪಡೆಗಳು ಹಾಗೂ ತಾಲಿಬಾನ್ ಉಗ್ರರ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ ಎಂದು ಹೇಳಲಾಗಿದೆ.

ಶಾಂತಿ ಸ್ಥಾಪನೆಯ ಕುರಿತು ಅಫ್ಗಾನಿಸ್ತಾನ ಸರ್ಕಾರ ಹಾಗೂ ತಾಲಿಬಾನ್ ಉಗ್ರ ಸಂಘಟನೆಯ ನಡುವೆ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಇದುವರೆಗೂ ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ.

‘31 ಸೈನಿಕರ ಮೃತದೇಹವನ್ನು ಆಸ್ಪತ್ರೆಗೆ ತರಲಾಗಿದೆ. ಗಾಯಗೊಂಡಿರುವ 24 ಮಂದಿಯನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಘಾಜ್ನಿ ಆಸ್ಪತ್ರೆಯ ನಿರ್ದೇಶಕ ಬಾಜ್ ಮೊಹಮ್ಮದ್ ಹೇಮತ್ ಹೇಳಿದ್ದಾರೆ.

‘ಸ್ಫೋಟಕಗಳು ತುಂಬಿದ್ದ ಕಾರೊಂದನ್ನು ಪರ್ವತಗಳ ತಪ್ಪಲಿನಲ್ಲಿರುವ ಸೇನಾ ನೆಲೆಯೊಳಗೆ ನುಗ್ಗಿಸಿದ ಉಗ್ರನೊಬ್ಬ ಬಳಿಕ ಅದನ್ನು ಸ್ಫೋಟಿಸಿದ್ದಾನೆ’ ಎಂದು ಆಂತರಿಕ ಭದ್ರತಾ ಸಚಿವಾಲಯದ ವಕ್ತಾರ ತಾರಿಕ್ ಆರಿಯನ್ ತಿಳಿಸಿದ್ದಾರೆ.

ಮೃತ ಯೋಧರ ಶವಗಳು ಹಾಗೂ ಗಾಯಗೊಂಡವರನ್ನು ಸೇನಾ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.