ಲಂಡನ್ : ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲ್ಲಿಯ ಡೌನಿಂಗ್ ಸ್ಟ್ರೀಟ್ (ಪ್ರಧಾನಿ ಕಚೇರಿ) ಹೊರಗೆ ರಿಷಿ ಸುನಕ್ ಅವರು ಮಾಡಿದ ಭಾಷಣವು ನೂತನ ಪ್ರಧಾನಿಗಳ ‘ಸುದೀರ್ಘ ಮೊದಲ ಭಾಷಣ’ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ರಿಷಿ ಅವರ ಪ್ರಥಮ ಭಾಷಣವು5 ನಿಮಿಷ 56 ಸೆಕೆಂಡುಗಳಷ್ಟು ದೀರ್ಘವಾಗಿತ್ತು. 2019ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಬೋರಿಸ್ ಜಾನ್ಸನ್ (11 ನಿಮಿಷ, 13 ಸೆಕೆಂಡುಗಳ ಭಾಷಣ) ಹೊರತುಪಡಿಸಿದರೆ ಹಿಂದಿನ ಯಾವ ಪ್ರಧಾನಿಯೂ ಇಷ್ಟು ಸುದೀರ್ಘ ಭಾಷಣ ಮಾಡಿಲ್ಲ ಎಂದು ದಿ ಇಂಡಿಪೆಂಡೆಂಟ್ ಸುದ್ದಿ ಪತ್ರಿಕೆ ವರದಿ ಮಾಡಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದ ಲಿಜ್ ಟ್ರಸ್ ಅವರು 4 ನಿಮಿಷ, 4 ಸೆಕಂಡುಗಳಲ್ಲಿ ಭಾಷಣ ಮುಗಿಸಿದ್ದರು. ಅವರಿಗೆ ಹೋಲಿಸಿದರೆ ಸುನಕ್ ಅವರು ಭಾಷಣಕ್ಕೆ 2 ನಿಮಿಷ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ.

ಹಿಂದಿನ ಪ್ರಧಾನಿಗಳು ಭಾಷಣಕ್ಕೆ ತೆಗೆದುಕೊಂಡ ಸಮಯ:

2016– ತೆರೆಸಾ ಮೇ: 4 ನಿಮಿಷ, 42 ಸೆಕೆಂಡುಗಳು

2010– ಡೇವಿಡ್ ಕ್ಯಾಮರೂನ್: 4 ನಿಮಿಷ

2007– ಗೋರ್ಡಾನ್ ಬ್ರೌನ್: 2 ನಿಮಿಷ, 49 ಸೆಕೆಂಡುಗಳು

1997– ಟೋನಿ ಬ್ಲೇರ್: 5 ನಿಮಿಷ, 17 ಸೆಕೆಂಡುಗಳು

1990– ಜಾನ್ ಮೇಜರ್: 2 ನಿಮಿಷ, 49 ಸೆಕೆಂಡುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.