ಭಾನುವಾರ, ಸೆಪ್ಟೆಂಬರ್ 19, 2021
30 °C

ಲೈಂಗಿಕ ಕಾರ್ಯಕರ್ತೆಯರನ್ನು ಕೊಲ್ಲಲು ಪಟ್ಟಿ ತಯಾರಿಸುತ್ತಿದೆ ತಾಲಿಬಾನ್: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಮೆರಿಕ ಸೇನೆ ಅಫ್ಗಾನಿಸ್ತಾನದಿಂದ ಹೊರನಡೆದ ಬಳಿಕ ಆಡಳಿತವನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್‌ ಉಗ್ರ ಸಂಘಟನೆ, ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ಕೊಲ್ಲಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಲೈಂಗಿಕ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಬಹುದು ಎಂದು ಹೇಳಲಾಗಿದೆ.

ವಿದೇಶಿಗರೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ಮಹಿಳೆಯರಿಗಾಗಿ ತಾಲಿಬಾನಿಗಳು ಪೋರ್ನ್‌ (ಅಶ್ಲೀಲ) ವೆಬ್‌ಸೈಟ್‌ಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಲೈಂಗಿಕ ಕಾರ್ಯಕರ್ತೆಯರನ್ನು ಗುರುತಿಸಿ ಅವರನ್ನು ಕೊಲ್ಲುವುದು ಅಥವಾ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುವುದು ತಾಲಿಬಾನಿಗಳ ಉದ್ದೇಶ ಎಂದು ಹಿಂದಿ ಪತ್ರಿಕೆ ನವಭಾರತ್ ಟೈಮ್ಸ್‌‌ (Navbharat Times) ವರದಿ ಮಾಡಿದೆ.

ಉಗ್ರ ಸಂಘಟನೆಯು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರ ಪತ್ತೆಗಾಗಿ ಅಭಿಯಾನ ನಡೆಸುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲಿಬಾನ್‌, 1996 ರಿಂದ 2001ರವರೆಗೆ ಅಧಿಕಾರಿದಲ್ಲಿದ್ದಾಗಲೂ ಇಂತಹ ಮಹಿಳೆಯರಿಗೆ ಸಾರ್ವಜನಿಕವಾಗಿ ಮರಣದಂಡನೆ ವಿಧಿಸಿತ್ತು. ಇದು ಮಹಿಳೆಯರಲ್ಲಿನ ಆತಂಕವನ್ನು ಹೆಚ್ಚು ಮಾಡಿದೆ.

ಈ ಸಂಘಟನೆ, ಅಕ್ರಮ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆಯರನ್ನು ಮತ್ತು ಮದುವೆಯಾದ ಬಳಿಕ ಬೇರೆಯವರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆಯರನ್ನು ಕಳೆದ 20 ವರ್ಷಗಳಿಂದಲೂ ಹತ್ಯೆ ಮಾಡುತ್ತಲೇ ಬಂದಿದೆ ಎಂದೂ ವರದಿಯಾಗಿದೆ.

ಇವನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು