ಕಂದಹಾರ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ; ವಿಮಾನಗಳ ಹಾರಾಟ ಸ್ಥಗಿತ

ಕಾಬೂಲ್: ಅಫ್ಗಾನಿಸ್ತಾನದ ದಕ್ಷಿಣ ಭಾಗದಲ್ಲಿರುವ ಕಂದಹಾರ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ ನಡೆದಿದೆ. ತಡರಾತ್ರಿ ಕನಿಷ್ಠ ಮೂರು ರಾಕೆಟ್‌ಗಳು ವಿಮಾನ ನಿಲ್ದಾಣಕ್ಕೆ ನುಗ್ಗಿದ್ದು, ಅಫ್ಗಾನಿಸ್ತಾನದ ಸೇನಾ ಪಡೆಗಳು ನಡೆಸುತ್ತಿರುವ ವಾಯು ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ತಾಲಿಬಾನಿಗಳು ಈ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ರಾಕೆಟ್ ದಾಳಿಯಿಂದಾಗಿ ವಿಮಾನ ನಿಲ್ದಾಣದಿಂದ ಎಲ್ಲ ವಿಮಾನಗಳ ಹಾರಾಟವನ್ನು ರದ್ದುಪಡಿಸಿರುವುದಾಗಿ ಅಫ್ಗಾನಿಸ್ತಾನ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ವಿಮಾನದ ಹಾರಾಟಕ್ಕೆ ಬಳಸುವ ರನ್‌ವೇಗೆ ಹಾನಿಯಾಗಿದ್ದು, ಸಾವು–ನೋವಿನ ಕುರಿತು ವರದಿಯಾಗಿಲ್ಲ ಎಂದಿದ್ದಾರೆ.
'ಕಂದಹಾರ್ ವಿಮಾನ ನಿಲ್ದಾಣವನ್ನು ನಮ್ಮ ಮೇಲೆ ವಾಯುದಾಳಿ ನಡೆಸಲು ಶತ್ರುಪಡೆ ಬಳಸಿಕೊಳ್ಳುತ್ತಿರುವುದರಿಂದ ನಾವು ಅದರ ಮೇಲೆ ಗುರಿಯಾಗಿಸಿದೆವು' ಎಂದು ಭಾನುವಾರ ತಾಲಿಬಾನ್ ವಕ್ತಾರ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: ತಾಲಿಬಾನ್ ಪ್ರಬಲ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ರಾಕೆಟ್ ದಾಳಿ ತಡೆ ವ್ಯವಸ್ಥೆ | Prajavani
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.