ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ನಾಲ್ವರು ಸದಸ್ಯರ ತಮಿಳು ಕುಟುಂಬವೊಂದು ಶ್ರೀಲಂಕಾಕ್ಕೆ ಗಡೀಪಾರಾಗುವುದರ ವಿರುದ್ಧ ನ್ಯಾಯಾಲಯದಲ್ಲಿ ಮತ್ತೊಮ್ಮೆಗೆಲುವು ಸಾಧಿಸಿದೆ.

ಶ್ರೀಲಂಕಾದಿಂದ 2012 ಮತ್ತು 2013ರಲ್ಲಿ ಕಳ್ಳಸಾಗಣೆ ಹಡಗುಗಳ ಮೂಲಕ ಪ್ರತ್ಯೇಕವಾಗಿ ಆಸ್ಟ್ರೇಲಿಯಾಕ್ಕೆ ಬಂದಿದ್ದ ಪ್ರಿಯಾ ಮತ್ತು ನಾಡೇಸ್ ಮುರುಗಪ್ಪನ್, 2014ರಲ್ಲಿ ವಿವಾಹವಾದರು. ಈ ದಂಪತಿಗೆ ಕೊಪಿಕಾ(5) ಮತ್ತು ತರುಣಿಕಾ(3) ಪುತ್ರಿಯರು ಇದ್ದಾರೆ.

ಶ್ರೀಲಂಕಾದಲ್ಲಿ ಕಿರುಕುಳ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಈ ಕುಟುಂಬ ಆಸ್ಟ್ರೇಲಿಯಾದಲ್ಲೇ ನೆಲೆಸಲು ‘ನಿರಾಶ್ರಿತರ ವೀಸಾ‘ ಗಳಿಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರು. 2018ರವರೆಗೆ ಈ ಕುಟುಂಬ ಆಸ್ಟ್ರೇಲಿಯಾದ ಬಿಲಿಯೋವಿಲಾದ ಔಟ್‌ಬ್ಯಾಕ್ ನಗರದಲ್ಲಿ ವಾಸಿಸುತ್ತಿತ್ತು. ಆಸ್ಟ್ರೇಲಿಯಾದಲ್ಲೇ ವಾಸಿಸುವ ಸಂಬಂಧ ಸರ್ಕಾರಕ್ಕೆ ‘ನಿರಾಶ್ರಿತರ ವೀಸಾ‘ಕ್ಕಾಗಿ ಮನವಿ ಸಲ್ಲಿಸಿದ ನಂತರ ಆಗಸ್ಟ್ 2019ರಲ್ಲಿ ಈ ಕುಟುಂಬವನ್ನು ಕ್ರಿಸ್‌ಮಸ್ ದ್ವೀಪದಿಂದ ದೂರವಿರುವ ವಲಸೆ ಬಂಧನ ಕೇಂದ್ರದಲ್ಲಿ ಬಂಧಿಸಿಡಲಾಗಿತ್ತು.

ಈ ದಂಪತಿಯ ಎರಡನೇ ಪುತ್ರಿ, ತಾನು ಆಸ್ಟ್ರೇಲಿಯಾದಲ್ಲೇ ಉಳಿಯುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಲ್ಲಿಸಿದ ವೀಸಾ ಅರ್ಜಿಯ ವಿಷಯದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಂಡಿಲ್ಲದ ಕಾರಣ ಗಡೀಪಾರು ಮಾಡಬೇಕೆಂಬ ಸರ್ಕಾರದ ಆದೇಶವನ್ನು ನ್ಯಾಯಾಧೀಶರೊಬ್ಬರು ತಳ್ಳಿಹಾಕಿದ್ದರು. ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಫೆಡರಲ್ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠ, ಸರ್ಕಾರದ ಅರ್ಜಿಯನ್ನು ತಳ್ಳಿಹಾಕಿ, ಈ ಹಿಂದಿನ ಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.