ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಪಿಎಂ ಹಸೀನಾ ಇಸ್ಲಾಂ ಮೂಲಭೂತವಾದಿಗಳ ತಾಯಿ: ತಸ್ಲಿಮಾ

Last Updated 7 ಏಪ್ರಿಲ್ 2022, 9:33 IST
ಅಕ್ಷರ ಗಾತ್ರ

ಬೆಂಗಳೂರು: ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಇಸ್ಲಾಂ ಮೂಲಭೂತವಾದಿಗಳ ತಾಯಿಯಾಗಿದ್ದಾರೆ. ಬಾಂಗ್ಲಾದೇಶವೂ ಇಸ್ಲಾಮಿಕ್‌ ರಾಷ್ಟ್ರವಾಗುತ್ತಿದೆ ಎಂದು ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್‌ ಕಳವಳ ವ್ಯಕ್ತಪಡಿಸಿದ್ದಾರೆ.

ವಿಜ್ಞಾನ ತರಗತಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತ್ತು ಪ್ರವಾದಿ ಮುಹಮ್ಮೊದ್‌ ಅವರಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಶಿಕ್ಷಕರೊಬ್ಬರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿ ತಸ್ಲಿಮಾ ನಸ್ರೀನ್‌ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

'ಕುರಾನ್‌ ವೈಜ್ಞಾನಿಕ ತಳಹದಿಯದ್ದಾಗಿದೆ ಮತ್ತು ಮುಹಮ್ಮದ್‌ ವಿಶ್ವದ ದೊಡ್ಡ ವಿಜ್ಞಾನಿ ಎಂಬುದನ್ನು ಒಪ್ಪಿಕೊಳ್ಳದ ವಿಜ್ಞಾನ ಶಿಕ್ಷಕನನ್ನು ಬಾಂಗ್ಲಾದೇಶದಲ್ಲಿ ಜೈಲಿಗೆ ಕಳುಹಿಸಲಾಗಿದೆ. ಬಾಂಗ್ಲಾದೇಶವು ಇಸ್ಲಾಮಿಕ್‌ ರಾಷ್ಟ್ರವಾಗುತ್ತಿದೆ. ಎಲ್ಲಾ ಇಸ್ಲಾಮಿಕ್‌ ಮೂಲಭೂತವಾದಿಗಳಿಗೆ ಹಸೀನಾ ತಾಯಿಯಾಗಿದ್ದಾರೆ' ಎಂದು ತಸ್ಲಿಮಾ ಅವರು ಟ್ವೀಟ್‌ ಮಾಡಿದ್ದಾರೆ.

ಬಾಂಗ್ಲಾದೇಶವು ಜಿಹಾದಿಸ್ತಾನವಾಗಿ ಮಾರ್ಪಟ್ಟಿದೆ. ಮದರಸಾಗಳು ಮೂಲಭೂತವಾದಿಗಳನ್ನು ಹುಟ್ಟುಹಾಕುವ ತಾಣಗಳಾಗಿವೆ. ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಈ ಹಿಂದೆಯೂ ತಸ್ಲಿಮಾ ಆರೋಪಿಸಿದ್ದರು.

ತಸ್ಲಿಮಾ ಅವರು ಇಸ್ಲಾಂ ಸಿದ್ಧಾಂತ ವಿರೋಧಿಸಿದ ಕಾರಣಕ್ಕಾಗಿ ಮೂಲಭೂತವಾದಿ ಸಂಘಟನೆಗಳಿಂದ ಕೊಲೆ ಬೆದರಿಕೆ ಎದುರಿಸುತ್ತಾ, 1994ರಲ್ಲಿ ಬಾಂಗ್ಲಾದೇಶ ತೊರೆದು ಭಾರತದಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT