ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಬಿಟ್ಟು ಪಲಾಯನ ಮಾಡುತ್ತಿರುವವರಿಗೆ ಸಹಾಯಹಸ್ತ ಚಾಚಿದ ಟೆಸ್ಲಾ

Last Updated 1 ಮಾರ್ಚ್ 2022, 9:43 IST
ಅಕ್ಷರ ಗಾತ್ರ

ಕೀವ್: ರಷ್ಯಾ ಆಕ್ರಮಣದಿಂದ ಭಯಬಿದ್ದು, ಉಕ್ರೇನ್ ದೇಶ ಬಿಟ್ಟು ಪಲಾಯನ ಮಾಡುತ್ತಿರುವವರಅನುಕೂಲಕ್ಕಾಗಿ ಉಕ್ರೇನ್ ಸುತ್ತಮುತ್ತಲಿನ ಅನೇಕ ದೇಶಗಳಲ್ಲಿ ಟೆಸ್ಲಾ ಕಂಪನಿ ಉಚಿತವಾಗಿ ಇಲೆಕ್ಟ್ರಿಕಲ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.

ಉಕ್ರೇನ್ ಸುತ್ತಮುತ್ತಲಿರುವ ರಾಷ್ಟ್ರಗಳಲ್ಲಿನ ಗಡಿಗಳಲ್ಲಿ ಟೆಸ್ಲಾ, ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಟೆಸ್ಲಾ ಇ–ವೆಹಿಕಲ್ ಇರುವವರು ಹಾಗೂ ಟೆಸ್ಲಾ ಅಲ್ಲದೇ ಬೇರೆ ಕಂಪನಿಯ ಇ–ವೆಹಿಕಲ್‌ಗಳನ್ನು ಹೊಂದಿರುವವರು ಇಲ್ಲಿ ಚಾರ್ಜ್ ಮಾಡಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ ಎಂದು 'Electrek' ವೆಬ್‌ಸೈಟ್ ವರದಿ ಮಾಡಿದೆ.

ಪೋಲ್ಯಾಂಡ್, ಸ್ಲೊವೇಕಿಯಾ ಹಾಗೂ ಹಂಗೇರಿಯ ಎರಡು ಕಡೆಗಳಲ್ಲಿ ಇ–ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಟೆಸ್ಲಾ ತಿಳಿಸಿದೆ.

‘ನಮ್ಮ ಸಹಾಯ ನಿಮ್ಮನ್ನು ಸುರಕ್ಷಿತ ಸ್ಥಳಕ್ಕೆ ಗುರಿ ಮುಟ್ಟಿಸಲಿದೆ’ ಎಂದು ಉಕ್ರೇನ್‌ ಬಿಟ್ಟು ತೆರಳುತ್ತಿರುವವರನ್ನು ಉದ್ದೇಶಿಸಿಸಿ ಟೆಸ್ಲಾ ಹೇಳಿದೆ.

ಅಮೆರಿಕದಲ್ಲಿ ಉಂಟಾದ ಹರಿಕೇನ್ ಚಂಡಮಾರುತ ಸೇರಿದಂತೆ ಅನೇಕ ಪ್ರಾಕೃತಿಕ ವಿಕೋಪಗಳಲ್ಲಿ ಕೂಡ ಟೆಸ್ಲಾ ಇದೇ ರೀತಿ ಸೂಪರ್‌ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಿತ್ತು.

ರಷ್ಯಾ ಕಳೆದ ಶುಕ್ರವಾರ ನೆರೆಯ ಉಕ್ರೇನ್ ಮೇಲೆ ಆಕ್ರಮಣ ಮಾಡಿ ಆ ದೇಶವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಲ್ಲಿ ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ, ಇದಕ್ಕೆ ಉಕ್ರೇನ್ ತೀವ್ರ ಪ್ರತಿರೋಧ ಒಡ್ಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT