ಮಂಗಳವಾರ, ಜನವರಿ 25, 2022
24 °C

ಓಮೈಕ್ರಾನ್ ಆತಂಕ: ಅಮೆರಿಕದ ಎಲ್ಲ ವಯಸ್ಕರಿಗೆ ಬೂಸ್ಟರ್ ಡೋಸ್ ಶಿಫಾರಸು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಆತಂಕದ ಹಿನ್ನೆಲೆಯಲ್ಲಿ 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆಯುವಂತೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು ಶಿಫಾರಸು ಮಾಡಿದೆ.

ಫೈಜರ್ ಮತ್ತು ಮಾಡರ್ನಾ ಲಸಿಕೆ ಪಡೆದು 6 ತಿಂಗಳ ನಂತರ ಮತ್ತು ಜಾನ್ಸನ್ ಅಂಡ್ ಜಾನ್ಸನ್ ಲಸಿಕೆ ಪಡೆದು ಎರಡು ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯುವಂತೆ ಸೂಚಿಸಿದೆ.

ಎಲ್ಲ ವಯಸ್ಕರೂ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಪಡೆಯಲು ಅರ್ಹರು ಎಂದು ಕಳೆದ ವಾರ ಅಮೆರಿಕದ ಪ್ರಾಧಿಕಾರವು ಘೋಷಿಸಿದ ಬಳಿಕ ಆರೋಗ್ಯ ನಿಯಂತ್ರಣ ಕೆಂದ್ರವು ಈ ಆದೇಶ ಮಾಡಿದೆ.

'ಓಮೈಕ್ರಾನ್(B.1.1.529) ಆತಂಕವು ಕೋವಿಡ್ ಲಸಿಕೆ, ಬೂಸ್ಟರ್‌ ಡೋಸ್ ಮತ್ತು ಕೋವಿಡ್ -19 ನಿಂದ ರಕ್ಷಣೆ ಪಡೆಯಲು ಅಗತ್ಯವಿರುವ ಎಲ್ಲ ತಡೆಗಟ್ಟುವ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಮತ್ತಷ್ಟು ಒತ್ತಿ ಹೇಳುತ್ತದೆ’ಎಂದು ಸಿಡಿಸಿ ನಿರ್ದೇಶಕ ರೋಚೆಲ್ ವಾಲೆನ್ಸ್ಕಿ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಈಗಲೂ ಲಸಿಕೆ ಪಡೆಯದ 4.7 ಕೋಟಿ ಜನರು ಕೂಡಲೇ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುತ್ತೇನೆ. ಕಡಿಮೆ ಅಪಾಯವಿದ್ದರೂ ಸಹ ಮಕ್ಕಳು ಮತ್ತು ಹದಿ ಹರೆಯದವರು ಲಸಿಕೆ ಪಡೆಯಬೇಕು ಎಂದಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು