ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ವೈರಸ್ ನುಸುಳಿರುವುದಕ್ಕೆ ವೈಜ್ಞಾನಿಕ ಪುರಾವೆ ಇಲ್ಲ: ವಿಜ್ಞಾನಿಗಳ ಗುಂಪು

Last Updated 6 ಜುಲೈ 2021, 14:06 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂಬ ಸಿದ್ಧಾಂತವನ್ನು ಬೆಂಬಲಿಸಲು ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಯಾವುದೇ ಪುರಾವೆಗಳಿಲ್ಲ. ಇತ್ತೀಚಿನ, ಉನ್ನತ ಅಧ್ಯಯನಗಳು ಕೊರೊನಾ ವೈರಸ್ ಪ್ರಕೃತಿಯಲ್ಲಿ ವಿಕಸನಗೊಂಡಿದೆ ಎಂದು ಬಲವಾಗಿ ಸೂಚಿಸುತ್ತವೆ ಎಂದು ವಿಜ್ಞಾನಿಗಳ ಗುಂಪೊಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಬರೆದಿದೆ.

ಸೋಮವಾರ ಪ್ರಕಟವಾದ ವರದಿಯನ್ನು ವಿಶ್ವದಾದ್ಯಂತದ ಎರಡು ಡಜನ್ ಜೀವಶಾಸ್ತ್ರಜ್ಞರು, ಪರಿಸರ ವಿಜ್ಞಾನಿಗಳು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಪಶುವೈದ್ಯರು ಸಂಗ್ರಹಿಸಿದ್ದಾರೆ.

‘ವೈರಸ್ ಪ್ರಕೃತಿಯಲ್ಲಿ ವಿಕಸನಗೊಂಡಿದೆ ಎಂಬುದಕ್ಕೆ ಹೊಸ, ವಿಶ್ವಾಸಾರ್ಹ ಮತ್ತು ಪೀರ್-ರಿವ್ಯೂಡ್ ಪುರಾವೆಗಳಿಂದ ಹೊರಬಂದ ಬಲವಾದ ಸುಳಿವನ್ನು ವೈಜ್ಞಾನಿಕ ವರದಿಯಲ್ಲಿ ಉಲ್ಲೇಖಿಸಲಾಗಿದ್ದು ನಾವು ಅದನ್ನು ನಂಬುತ್ತೇವೆ. ಆದರೆ, ಕೊರೊನಾ ವೈರಸ್ ಪ್ರಯೋಗಾಲಯದಿಂದ-ಸೋರಿಕೆಯಾಗಿದೆ ಎಂಬ ವಾದವು ವೈಜ್ಞಾನಿಕವಾಗಿ ಮೌಲ್ಯೀಕರಿಸುವ ಪುರಾವೆಗಳಿಲ್ಲದೆ ಉಳಿದುಕೊಂಡಿವೆ.’ಎಂದು ಅಧ್ಯಯನಕಾರರು ಜರ್ನಲ್‌ನಲ್ಲಿ ಬರೆದಿದ್ದಾರೆ.

ಅದೇ ವಿಜ್ಞಾನಿಗಳ ತಂಡವು ಕಳೆದ ವರ್ಷ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಲ್ಯಾಬ್ ಸೋರಿಕೆ ಕಲ್ಪನೆಯನ್ನು ಪಿತೂರಿ ಸಿದ್ಧಾಂತವೆಂದು ತಳ್ಳಿಹಾಕಿತ್ತು.

2019 ರ ಡಿಸೆಂಬರ್‌ನಲ್ಲಿ ಮೊದಲ ಪ್ರಕರಣ ವರದಿಯಾಗಿದ್ದ ಚೀನಾದ ನಗರ ವುಹಾನ್‌ನ ಲ್ಯಾಬ್‌ನಿಂದ ವೈರಸ್ ನುಸುಳಿರುವ ಸಾಧ್ಯತೆ ಸೇರಿದಂತೆ ವೈರಸ್ ಮೂಲದ ಬಗ್ಗೆ ಹಲವು ದೇಶಗಳು ಹೆಚ್ಚಿನ ತನಿಖೆಗೆ ಮುಂದಾದ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT