ಸೋಮವಾರ, ಜೂನ್ 21, 2021
28 °C
ಭಾರತ ಹಿಂದೆಂದೂ ಕಾಣದ ಬಿಕ್ಕಟ್ಟನ್ನು ಎದುರಿಸುತ್ತಿದೆ: ರಂಗಸ್ವಾಮಿ

ಅನಿವಾಸಿ ಭಾರತೀಯರ ನೆರವಿಗೆ ಸೂಚನೆ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಭಾರತ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಾಗಿ ಅನಿವಾಸಿ ಭಾರತೀಯ ಸಮುದಾಯವು ಕೋವಿಡ್‌ ಬಿಕ್ಕಟ್ಟಿಗೆ ತುತ್ತಾಗಿರುವ ಭಾರತೀಯರಿಗೆ ಸಹಾಯ ಮಾಡಬೇಕು’ ಎಂದು ಭಾರತ ಮೂಲದ ಅಮೆರಿಕದ ಲೋಕೋಪಕಾರಿ ಹಾಗೂ ಅನಿವಾಸಿ ಭಾರತೀಯ ಸಂಘದ ಸ್ಥಾಪಕ ಎಂ.ಆರ್‌.ರಂಗಸ್ವಾಮಿ ಹೇಳಿದ್ದಾರೆ.

‘ಭಾರತವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ನಾನು ನಿಮ್ಮ ಬಳಿ ಎರಡು ಮನವಿಗಳನ್ನು ಮಾಡುತ್ತಿದ್ದೇನೆ. ಮೊದಲನೇಯದಾಗಿ ಭಾರತದಲ್ಲಿರುವ ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ನೆರವು ಒದಗಿಸಿ. ಇದರೊಂದಿಗೆ ಭಾರತಕ್ಕೆ ನಿಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡಿ’ ಎಂದು ಅವರು ಮನವಿ ಮಾಡಿದ್ದಾರೆ. 

ಇತ್ತೀಚಿಗೆ ರಂಗಸ್ವಾಮಿ ಅವರ ಅಕ್ಕ ಚೆನ್ನೈನಲ್ಲಿ ಕೋವಿಡ್‌ನಿಂದ ಮೃತಪಟ್ಟರು. 

‘ನಾನು ಭಾರತಕ್ಕೆ ನೆರವು ಒದಗಿಸಲು ಅಮೆರಿಕ ಸೇರಿದಂತೆ ವಿಶ್ವದ ಇತರೆ ಭಾಗಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ವಿವಿಧ ಅಭಿಯಾನಗಳಡಿ ₹ 40 ಲಕ್ಷಕ್ಕೂ ಅಧಿಕ ನೆರವು ಸಂಗ್ರಹಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು