ಭಾನುವಾರ, ನವೆಂಬರ್ 29, 2020
22 °C

ಅಮೆರಿಕ: ಡೊನಾಲ್ಡ್ ಟ್ರಂಪ್‌ ಬೆಂಬಲಿಗರಿಂದ ಹಲವೆಡೆ ಪ್ರತಿಭಟನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಫಲಿತಾಂಶ ದೋಷಾಪೂರಿತವಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದರು. ಇದಕ್ಕೆ ಬೆಂಬಲ ಸೂಚಿಸಿ ಟ್ರಂಪ್ ಬೆಂಬಲಿಗರು ಶನಿವಾರ ವಾಷಿಂಗ್ಟನ್‌ನಲ್ಲಿ ರ‍್ಯಾಲಿಗಳನ್ನು ನಡೆಸಿದರು.

ಇತ್ತೀಚಿಗೆ ಡೆಮಾಕ್ರಟಿಕ್‌ ‍ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಯಿತು. ಇದರ ಬೆನ್ನಲ್ಲೇ ಟ್ರಂಪ್‌ಗೆ ಬೆಂಬಲ ಸೂಚಿಸಿ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದವು.

ಚುನಾವಣೆಯಲ್ಲಿ ತನ್ನ ಸೋಲನ್ನು ಒಪ್ಪಿಕೊಳ್ಳದ ಟ್ರಂಪ್‌ ಅವರು ಅಧ್ಯಕ್ಷೀಯ ಕಾರ್ಯನಿರ್ವಾಹಕ ಅಧಿಕಾರವನ್ನು ವರ್ಗಾವಣೆ ಮಾಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 

ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಟ್ರಂಪ್‌ ಅವರು ದೂರಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ  ಅಧಿಕಾರಿಗಳ ತಂಡವು, ‘ನ.3ರಂದು ಚುನಾವಣೆ ಉತ್ತಮ ರೀತಿಯಲ್ಲಿ ನಡೆದಿದೆ. ಇದು ಅಮೆರಿಕದ ಇತಿಹಾಸದಲ್ಲಿ ನಡೆದ ಅತಿ ಪಾರದರ್ಶಕ  ಚುನಾವಣೆಯಾಗಿದೆ ಎಂದು ಪ‍್ರತಿಪಾದಿಸಿದ್ದಾರೆ.

 ಫ್ಲಾರಿಡಾದಲ್ಲಿ ಹಲವರು ಟ್ರಂಪ್‌ ಪರವಾಗಿ ಪ್ರತಿಭಟನೆ ನಡೆಸಿದ್ದು,ಈ ವೇಳೆ ‘ಎಲ್ಲ ಮತಗಳನ್ನು ಎಣಿಸಿ’ ‘ನಮಗೆ ಮಾರ್ಕ್ಸ್‌ವಾದಿ ಸರ್ಕಾರದಡಿ ಬದುಕಲು ಸಾಧ್ಯವಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು.

ಅರಿಜೋನ್‌ನಲ್ಲಿ ಸುಮಾರು 1,500 ಮಂದಿ ಜೋ ಬೈಡನ್‌ ವಿರುದ್ಧ ‍ಪ್ರತಿಭಟಿಸಿದರು ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು