ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈರೂತ್‌ ಸ್ಫೋಟ ಉದ್ದೇಶಪೂರ್ವಕ ದಾಳಿಯೇ ? ಡೊನಾಲ್ಡ್ ಟ್ರಂಪ್ ಶಂಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಂಕೆ
Last Updated 6 ಆಗಸ್ಟ್ 2020, 7:26 IST
ಅಕ್ಷರ ಗಾತ್ರ

ವಾಷಿಂಗ್ಟನ್: ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಮಂಗಳವಾರ ಸಂಭವಿಸಿರುವ ಸ್ಫೋಟ ಉದ್ದೇಶಪೂರ್ವಕ ದಾಳಿಯಾಗಿರುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಶಂಕೆ ವ್ಯಕ್ತಪಡಿಸಿದ್ದಾರೆ.

ಬೈರೂತ್‌ನಲ್ಲಿ ಸಂಭವಿಸಿರುವ ಸ್ಫೋಟದ ಹಿಂದೆ ದಾಳಿಯ ಉದ್ದೇಶವಿಲ್ಲ, ಅದು ರಾಸಾಯನಿಕ ಸ್ಫೋಟದಿಂದಲೇ ಸಂಭವಿಸಿರುವುದು ಎಂದು ಅಮೆರಿಕದ ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಫಷ್ಟಪಡಿಸಿದ ನಂತರವೂ, ಟ್ರಂಪ್ ’ಈ ಘಟನೆ ಉದ್ದೇಶಪೂರ್ವಕ ದಾಳಿಯಾಗಿರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ.

ಲೆಬನಾನ್‌ನಲ್ಲಿರುವ ಅಮೆರಿಕದ ಅಧಿಕಾರಿಗಳು ಬಾಂಬ್‌ ಸ್ಫೋಟದಿಂದ ಈ ಘಟನೆ ಸಂಭವಿಸಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್,’ಅದು ಏನೇ ಆಗಿರಲಿ. ಇದೊಂದು ಭಯಾನಕ ಘಟನೆ’ ಎಂದು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

’ಬಾಂಬ್‌ ಸ್ಫೋಟ ಕೂಡ ಒಂದು ರೀತಿಯ ದಾಳಿಯೇ. ಇಷ್ಟಕ್ಕೂ ಈ ದೊಡ್ಡ ಘಟನೆಯನ್ನು ನೀವು ಆಕಸ್ಮಿಕ ಎಂದು ಹೇಗೆ ನಂಬುತ್ತೀರಿ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT