ಶನಿವಾರ, ಜನವರಿ 28, 2023
24 °C

ತೆರಿಗೆ ವಂಚನೆಯಲ್ಲಿ ಡೊನಾಲ್ಡ್ ಟ್ರಂಪ್ ಕುಟುಂಬದ ಸಂಸ್ಥೆಗೆ ದಂಡ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬಕ್ಕೆ ಸೇರಿರುವ ಸಂಸ್ಥೆಗಳಿಗೆ ತೆರಿಗೆ ವಂಚನೆ ಪ್ರಕರಣದಲ್ಲಿ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ. ಮುಂದಿನ ಅಧ್ಯಕ್ಷೀಯ ಚುನಾವಣೆ ಎದುರು ನೋಡುತ್ತಿರುವ ಟ್ರಂಪ್‌ಗೆ ಈ ತೀರ್ಪಿನಿಂದ ಹಿನ್ನಡೆಯಾಗುವ ಸಾಧ್ಯತೆಯಿದೆ.

ಟ್ರಂಪ್‌ ಆರ್ಗನೈಸೆಷನ್‌ ಮತ್ತು ಟ್ರಂಪ್‌ ಪೇರೋಲ್‌ ಕಾರ್ಪ್‌ಗಳು ತೆರಿಗೆ ವಂಚಿಸಿರುವುದು ಎಲ್ಲ ರೀತಿಯಿಂದಲೂ ಸಾಬೀತಾಗಿದೆ. ಮೊದಲ ಸಲ ಈ ಕಂಪನಿಗಳು ಅಪರಾಧಗಳಿಗಾಗಿ ಶಿಕ್ಷೆ ಅನುಭವಿಸಿವೆ. 

"ಇದು ದುರಾಸೆ ಮತ್ತು ವಂಚನೆಗೆ ಸಂಬಂಧಿಸಿದ ಪ್ರಕರಣವಾಗಿದೆ" ಎಂದು ಪ್ರಕರಣವನ್ನು ವಿಚಾರಣೆ ನಡೆಸಿದ ಮ್ಯಾನ್ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಹೇಳಿದರು.

ಟ್ರಂಪ್ ಅವರ ಮೇಲೆ ವೈಯಕ್ತಿಕವಾಗಿ ಆರೋಪ ಹೊರಿಸಲಾಗಿಲ್ಲ . ಆದರೆ ಅವರ ಹೆಸರನ್ನು ಹೊಂದಿರುವ ರಿಯಲ್ ಎಸ್ಟೇಟ್, ಹೋಟೆಲ್ ಮತ್ತು ಗಾಲ್ಫ್ ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು ಶಿಕ್ಷೆಗೊಳಗಾಗಿವೆ.  2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕ್‌ ಪಕ್ಷದಿಂದ ನಾಮನಿರ್ದೇಶನವನ್ನು ಬಯಸುತ್ತಿರುವ ಟ್ರಂಪ್‌ ಖ್ಯಾತಿಗೆ ಈ ಪ್ರಕರಣ ಕುತ್ತು ತರುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು