ಚುನಾವಣೆ ಬಗ್ಗೆ ವಿಶ್ವಾಸ ಮೂಡಿಸುವುದು ನನ್ನ ಹೋರಾಟದ ಉದ್ದೇಶ: ಟ್ರಂಪ್

ವಾಷಿಂಗ್ಟನ್: ಇತ್ತೀಚೆಗೆ ನಡೆದ ಚುನಾವಣೆಯ ಮತಚಲಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಚುನಾವಣೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ, ಈ ಅಕ್ರಮ ಮತದಾನದ ಬಗ್ಗೆ ಹೋರಾಟ ಮಾಡುತ್ತೇನೆ‘ ಎಂದು ಬೆಂಬಲಿಗರಿಗೆ ತಿಳಿಸಿದರು.
ಇದನ್ನೂ ಓದಿ: ಎಚ್1ಬಿ ವೀಸಾ: ಡೊನಾಲ್ಡ್ ಟ್ರಂಪ್ ನಿಯಮ ರದ್ದು
ಶ್ವೇತಭವನದಲ್ಲಿ ನಡೆದ ಕ್ರಿಸ್ಮಸ್ ಪಾರ್ಟಿಯಲ್ಲಿ ಮಾತನಾಡಿದ ಅವರು, ‘ಕೆಲವು ರಾಜ್ಯಗಳಲ್ಲಿ ಮತ ಎಣಿಕೆ ಬಾಕಿ ಇದ್ದರೂ, ಅಭ್ಯರ್ಥಿಯೊಬ್ಬರನ್ನು ಚುನಾವಣೆಯಲ್ಲಿ ಗೆದ್ದಿದ್ದಾರೆಂದು ಮೆರವಣಿಗೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ಸಾಂವಿಧಾನಿಕವಾಗಿ ಪ್ರತಿ ಮತ ಪತ್ರವೂ ಎಣಿಕೆಯಾಗಬೇಕು. ಆನಂತರ ಗೆಲುವು–ಸೋಲು ಖಾತರಿಪಡಿಸಬೇಕು‘ ಎಂದು ಹೇಳಿದರು.
ಬೈಡನ್ ಸರ್ಕಾರ ರಚನೆಗೆ ಹಾಗೂ ಅಧಿಕಾರ ಹಸ್ತಾಂತರ ಪ್ರಕ್ರಿಯೆಗೆ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಒಪ್ಪಿಗೆ ನೀಡಿದ್ದರೂ, ಚುನಾವಣೆಯಲ್ಲಿ ತಮ್ಮ ಸೋಲನ್ನು ಇನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ಬೈಡನ್ ಗೆಲುವಿನ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ. ಈ ನಡುವೆ ಪ್ರಮುಖ ಕ್ಷೇತ್ರಗಳಿರುವ ರಾಜ್ಯಗಳಲ್ಲಿ ಚುನಾವಣಾ ಅಧಿಕಾರಿಗಳು ಬೈಡನ್ ಅವರು ವಿಜೇತರಾಗಿದ್ದಾರೆಂದು ಘೋಷಿಸಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.