ಪತ್ರಕರ್ತ ಖಶೋಗ್ಗಿ ಹತ್ಯೆ ಪ್ರಕರಣ ಸೌದಿಗೆ ವರ್ಗಾವಣೆ: ಟರ್ಕಿ

ಅಂಕಾರ: 'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಅಂಕಣಕಾರ ಜಮಾಲ್ ಖಶೋಗ್ಗಿ ಅವರ ಹತ್ಯೆ ಪ್ರಕರಣವನ್ನು ಸೌದಿ ಅರೇಬಿಯಾಕ್ಕೆ ವರ್ಗಾವಣೆ ಮಾಡಲು ಸರ್ಕಾರ ಶಿಫಾರಸು ಮಾಡಲಿದೆ ಎಂದು ಟರ್ಕಿಯ ನ್ಯಾಯ ಸಚಿವ ಬೆಕಿರ್ ಬೊಜ್‌ಡ್ಯಾಗ್ ಹೇಳಿದ್ದಾರೆ.
ಆರೋಪಿಗಳಾಗಿರುವ ಸೌದಿ ಅರೇಬಿಯಾದ 26 ಪ್ರಜೆಗಳ ವಿರುದ್ಧದ ವಿಚಾರಣೆ ಇಸ್ತಾಂಬುಲ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಪ್ರಕರಣದ ವರ್ಗಾವಣೆಗೆ ಸೌದಿ ಅರೇಬಿಯಾ ಮನವಿ ಮಾಡಿತ್ತು. ಈ ವಿಷಯವನ್ನು ಟರ್ಕಿಯ ಪ್ರಾಸಿಕ್ಯೂಟರ್ ಅವರು ನ್ಯಾಯಾಲಯಕ್ಕೆ ತಿಳಿಸಿದ ಬೆನ್ನಲ್ಲೇ, ಸಚಿವ ಬೆಕಿರ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಪ್ರಕರಣ ಕುರಿತು ನ್ಯಾಯ ಸಚಿವಾಲಯದ ಅಭಿಪ್ರಾಯ ಪಡೆಯಲಾಗುವುದು ಎಂದರು. ನಂತರ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ಮುಂದೂಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.