ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಗಾನ್‌ನಿಂದ ಪಲಾಯನ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ದುಬೈನಲ್ಲಿ ಪತ್ತೆ

Last Updated 18 ಆಗಸ್ಟ್ 2021, 15:15 IST
ಅಕ್ಷರ ಗಾತ್ರ

ದುಬೈ: ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ್ದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದುಬೈನಲ್ಲಿ ಪತ್ತೆಯಾಗಿದ್ದಾರೆ. ತಾಲಿಬಾನ್ ಆಕ್ರಮಣದ ಬಳಿಕ ಓಡಿ ಬಂದ ಅಶ್ರಫ್ ಘನಿ ಅವರಿಗೆ ಮಾನವೀಯತೆ ಆಧಾರದ ಮೇಲೆ ಆಶ್ರಯ ನೀಡಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿದೆ.

‘ಯುಎಇ ವಿದೇಶಾಂಗ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವಾಲಯವು, ಮಾನವೀಯತೆಯ ಆಧಾರದ ಮೇಲೆ ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಕುಟುಂಬವನ್ನು ದೇಶಕ್ಕೆ ಸ್ವಾಗತಿಸಿರುವುದಾಗಿ ದೃಢೀಕರಿಸುತ್ತೇವೆ’ ಎಂದು ಯುಎಇ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

ಭಾನುವಾರ, ತಾಲಿಬಾನ್ ಉಗ್ರರು ಕಾಬೂಲ್ ನಗರವನ್ನು ಆಕ್ರಮಿಸಲು ಬರುತ್ತಿದ್ದಂತೆ ಅಶ್ರಫ್ ಘನಿ ಅವರು ಅಫ್ಗಾನಿಸ್ತಾನದಿಂದ ಕುಟುಂಬದ ಜೊತೆ ಪಲಾಯನ ಮಾಡಿದ್ದರು.

‘ತಾಲಿಬಾನಿಗಳು ಗೆದ್ದಿದ್ದಾರೆ. ರಕ್ತಪಾತ’ವನ್ನು ತಪ್ಪಿಸಲು ದೇಶ ಬಿಟ್ಟು ಹೋಗುತ್ತಿರುವುದಾಗಿ ಅಶ್ರಫ್ ಘನಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದರು.

ಬುಧವಾರದವರೆಗೂ ಅವರು ಎಲ್ಲಿದ್ದಾರೆ ಎಂಬುದು ತಿಳಿದಿರಲಿಲ್ಲ, ಉಜ್ಬೆಕಿಸ್ತಾನ್ ಅಥವಾ ಒಮನ್‌ಗೆ ಪಲಾಯನ ಮಾಡಿರಬಹುದು ಎಂದು ಊಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT