ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Updates: 50 ಸಾವಿರ ಸಾವಿನ ಗಡಿ ದಾಟಿದ ಬ್ರಿಟನ್‌

Last Updated 12 ನವೆಂಬರ್ 2020, 6:53 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್‌ಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ಬುಧವಾರದ ವೇಳೆಗೆ 50 ಸಾವಿರ ದಾಟಿದ್ದು, ಈ ಮೂಲಕ ಬ್ರಿಟನ್‌ ಕೊರೊನಾ ವೈರಸ್ ಸೋಂಕಿನಿಂದ ಅತಿ ಹೆಚ್ಚು ಸಾವುಗಳನ್ನು ಕಂಡ ವಿಶ್ವದ ಐದನೇ ರಾಷ್ಟ್ರವಾಗಿದೆ.

ಮೊದಲ ಸ್ಥಾನದಲ್ಲಿ ಅಮೆರಿಕ, ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಮತ್ತು ಮೂರನೇ ಸ್ಥಾನದಲ್ಲಿ ಭಾರತ ಇದೆ. ಮೆಕ್ಸಿಕೊ ನಾಲ್ಕನೇ ಸ್ಥಾನದಲ್ಲಿದೆ. ಈಗ ಬ್ರಿಟನ್ ಐದನೇ ಸ್ಥಾನದಲ್ಲಿದೆ.

ಬ್ರಿಟನ್‌ನಲ್ಲಿ ಕೊರೊನಾ ವೈರಸ್ ಸೋಂಕು ಪರೀಕ್ಷೆ ಮಾಡಿಸಿದ 28 ದಿನಗಳಲ್ಲಿ 559 ಜನರು ಮೃತಪಟ್ಟಿದ್ದಾರೆ ಎಂದು ಬ್ರಿಟನ್ ಸರ್ಕಾರ ಅಂಕಿ ಅಂಶಗಳ ಸಹಿತ ಮಾಹಿತಿ ನೀಡಿದೆ. ಮೇ ತಿಂಗಳ ನಂತರ ನಿತ್ಯ ಸಾವಿನ ಸಂಖ್ಯೆ ಹೆಚ್ಚಾಗಿದೆ. ಬ್ರಿಟನ್‌ನಲ್ಲಿ ಒಟ್ಟು ಸಾವಿನ ಸಂಖ್ಯೆ 50365ಕ್ಕೆ ತಲುಪಿದೆ.

ಯೂರೋಪ್‌ನ ಇತರೆ ರಾಷ್ಟ್ರಗಳಿಗಿಂತ ಬ್ರಿಟನ್‌ನಲ್ಲಿ ಕೊರೊನಾ ಸಂಬಂಧಿತ ಅತಿ ಹೆಚ್ಚು ಸಾವುಗಳು ಸಂಭವಿಸಿವೆ. ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಸಂಬಂಧಿತ ಸಾವುಗಳು ಸಂಭವಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿರುವ ಅಮೆರಿಕ, ಬ್ರೆಜಿಲ್‌, ಭಾರತ ಮತ್ತು ಮೆಕ್ಸಿಕೊ ರಾಷ್ಟ್ರಗಳಲ್ಲಿ ಈ ಸೋಂಕಿನಿಂದ 50 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಕೋವಿಡ್ ಸಂಬಂಧಿತ ಸಾವುಗಳ ಪಟ್ಟಿಯನ್ನು ನಿರ್ವಹಿಸುತ್ತಿರುವ ಜಾನ್ಸ್‌ ಹಾಪ್ಕಿನ್ಸ್‌ ವಿಶ್ವವಿದ್ಯಾಲಯ ತಿಳಿಸಿದೆ.

ಕೊರೊನಾ ಸೋಂಕು ದೃಢಪಟ್ಟು 28 ದಿನಗಳ ನಂತರ ಕೋವಿಡ್‌ ಸಂಬಂಧಿತ ರೋಗಲಕ್ಷಣಗಳಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಪರಿಗಣಿಸಲಾಗಿದೆ.

ಯುರೋಪಿನ ಇತರ ರಾಷ್ಟ್ರಗಳಂತೆ, ಬ್ರಿಟನ್‌ನಲ್ಲೂ ಕೊರೊನಾ ವೈರಸ್‌ನ ಎರಡನೇ ಅಲೆ ಆರಂಭವಾಗಿದೆ. ಕಳೆದ ಕೆಲವು ವಾರಗಳಿಂದ ಸೋಂಕುಗಳನ್ನು ನಿಗ್ರಹಿಸಲು ಹೊಸ ನಿರ್ಬಂಧಗಳನ್ನು ವಿಧಿಸಿದೆ. ಇಂಗ್ಲೆಂಡ್‌ನಲ್ಲಿ ಈಗ ಎರಡನೇ ಬಾರಿ ಲಾಕ್‌ಡೌನ್‌ ಘೋಷಿಸಲಾಗಿದೆ. ಇದು ಡಿಸೆಂಬರ್ 2 ರಂದು ಮುಕ್ತಾಯಗೊಳ್ಳಲಿದೆ.

ಒಟ್ಟು 5.21 ಕೋಟಿ ಪ್ರಕರಣ
ಜಾನ್ಸ್‌ ಹಾಪ್‌ಕಿನ್ಸ್‌ ವಿವಿಯ ಮಾಹಿತಿ ಪ್ರಕಾರ ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 5 ಕೋಟಿ 21 ಲಕ್ಷ (5,21,29,134) ಜನರಿಗೆ ಕೋವಿಡ್‌–19 ಸೋಂಕು ತಗುಲಿದೆ. ಅದರಲ್ಲಿ 3 ಕೋಟಿ 39 ಲಕ್ಷ (3,39,26,869) ಮಂದಿ ಗುಣಮುಖರಾಗಿದ್ದು, 12 ಲಕ್ಷದ 84 ಸಾವಿರ (12,84,465) ಸೋಂಕಿತರು ಮೃತಪಟ್ಟಿದ್ದಾರೆ.

ಹೆಚ್ಚು ಸೋಂಕು ದೃಢಪಟ್ಟ ಅಮೆರಿಕದಲ್ಲಿ 1.04 ಕೋಟಿ ಪ್ರಕರಣಗಳು ವರದಿಯಾಗಿವೆ. 2.41 ಲಕ್ಷ ಸೋಂಕಿತರು ಮೃತಪಟ್ಟಿದ್ದು, 39.97 ಮಂದಿ ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 86.83 ಲಕ್ಷ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 80.66 ಸೋಂಕಿತರು ಚೇತರಿಸಿಕೊಂಡಿದ್ದಾರೆ. 1.28 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 1.63 ಲಕ್ಷ, ಮೆಕ್ಸಿಕೋದಲ್ಲಿ 96 ಸಾವಿರ ಹಾಗೂ ಇಟಲಿಯಲ್ಲಿ 42 ಸಾವಿರ ಸೋಂಕಿತರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT