ಜೂಲಿಯನ್ ಅಸಾಂಜ್ ಜಾಮೀನು ಅರ್ಜಿ ತಿರಸ್ಕೃತ

ಲಂಡನ್: ಬ್ರಿಟನ್ನಲ್ಲಿ 2019ರಿಂದ ಜೈಲಿನಲ್ಲಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ಗೆ ಜಾಮೀನು ನೀಡಲು ಬ್ರಿಟನ್ನ ನ್ಯಾಯಾಧೀಶರೊಬ್ಬರು ಬುಧವಾರ ನಿರಾಕರಿಸಿದ್ದಾರೆ.
ಬೇಹುಗಾರಿಕೆ ಪ್ರಕರಣದ ವಿಚಾರಣೆಗಾಗಿ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಅನ್ನು ವಶಕ್ಕೆ ನೀಡಬೇಕು ಎಂದು ಅಮೆರಿಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇತ್ತೀಚೆಗೆ ನಡೆದಿತ್ತು. ಈ ಅರ್ಜಿಯನ್ನು ಜಿಲ್ಲಾ ನ್ಯಾಯಾಧೀಶರಾದ ವನೀಸ್ಸಾ ಬರೈಟ್ಸರ್ ತಿರಸ್ಕರಿಸಿದ್ದರು. ‘ಈ ತೀರ್ಪನ್ನು ಪ್ರಶ್ನಿಸಿ ಅಮೆರಿಕದ ಅಧಿಕಾರಿಗಳು ಸಲ್ಲಿಸುವ ಅಪೀಲನ್ನು ನ್ಯಾಯಾಲಯವು ಪುರಸ್ಕರಿಸುವವರೆಗೂ ಜೈಲಿನಲ್ಲೇ ಇರುವಂತೆ’ ಅಸಾಂಜ್ಗೆ ಬರೈಟ್ಸರ್ ಆದೇಶಿಸಿದರು.
‘ಅವರ ಮಾನಸಿಕ ಆರೋಗ್ಯದ ಕಾರಣದಿಂದಾಗಿ, ಅಮೆರಿಕಕ್ಕೆ ಜೂಲಿಯನ್ ಅಸಾಂಜ್ ಅನ್ನು ಕಳುಹಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ’ ಎಂದು ಸೋಮವಾರ ಬರೈಟ್ಸರ್ ಸೋಮವಾರ ತೀರ್ಪು ನೀಡಿದ್ದರು.
‘ಜಾಮೀನು ನೀಡಿದರೆ ಜೂಲಿಯನ್ ಅಸಾಂಜ್ ಪರಾರಿಯಾಗುವ ಸಾಧ್ಯತೆ ಇದ್ದು, ಅವರನ್ನು ಸ್ವತಂತ್ರಗೊಳಿಸಿದರೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬರುವುದು ಅನುಮಾನ’ ಎಂದು ಬುಧವಾರ ಬರೈಟ್ಸರ್ ಹೇಳಿದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.