ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸ್ಮಾ ದಾನ: ಭಾರತ ಮೂಲದ ಪ್ರಜೆಗಳಿಗೆ ಬ್ರಿಟನ್‌ ಮನವಿ

ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾ ಜನರಲ್ಲಿ ಅಧಿಕ ಪ್ರತಿಕಾಯ ಉತ್ಪತ್ತಿ
Last Updated 21 ಆಗಸ್ಟ್ 2020, 11:58 IST
ಅಕ್ಷರ ಗಾತ್ರ

ಲಂಡನ್‌:ಕೊರೊನಾ ಸೋಂಕಿತರ ಪ್ರಾಣ ರಕ್ಷಣೆಗಾಗಿ, ಕೋವಿಡ್‌–19ನಿಂದ ಗುಣಮುಖರಾಗಿರುವ ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳ ಮೂಲದ ಜನರು ಪ್ಲಾಸ್ಮಾ ದಾನ ಮಾಡಬೇಕು ಎಂದು ಬ್ರಿಟನ್‌ನ ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ (ಎನ್‌ಎಚ್‌ಎಸ್‌) ಶುಕ್ರವಾರ ಮನವಿ ಮಾಡಿದೆ.

ವರ್ಷಾಂತ್ಯಕ್ಕೆ ಕೊರೊನಾ ಸೋಂಕಿನ ಎರಡನೇ ಅಲೆ ದೇಶವನ್ನು ಬಾಧಿಸಲಿದೆ ಎಂಬ ತಜ್ಞರ ಎಚ್ಚರಿಕೆಯೇ ಎನ್‌ಎಚ್‌ಎಸ್‌ ಇಂಥ ಮನವಿ ಮಾಡಲು ಕಾರಣ ಎನ್ನಲಾಗುತ್ತಿದೆ.

ಸ್ಥಳೀಯರಿಗೆ ಹೋಲಿಸಿದಾಗ ಭಾರತೀಯರು ಸೇರಿದಂತೆ ದಕ್ಷಿಣ ಏಷ್ಯಾದ ಮೂಲದ ಜನರಲ್ಲಿ ಎರಡು ಪಟ್ಟು ಹೆಚ್ಚು ಪ್ರತಿಕಾಯಗಳು ಉತ್ಪತ್ತಿಯಾಗಿರುತ್ತವೆ ಎಂಬುದು ತಜ್ಞರ ಅಭಿಪ್ರಾಯ. ಹೀಗಾಗಿಯೇ ಎನ್‌ಎಚ್‌ಎಸ್ ಈ ಮನವಿ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಏಷ್ಯಾ ಮೂಲದವರಲ್ಲಿ ಕೋವಿಡ್‌–19 ಹೆಚ್ಚಾಗಿ ಕಾಣಿಸಿಕೊಂಡಿತ್ತು. ಗುಣಮುಖರಾದವರ ಸಂಖ್ಯೆಯೂ ಅಧಿಕ. ಹೀಗಾಗಿ ಅವರು ದಾನ ಮಾಡುವ ಪ್ಲಾಸ್ಮಾದಿಂದ ಅನೇಕರ ಜೀವ ಉಳಿಸಲು ಸಾಧ್ಯ. ಈ ಮನವಿಗೆ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ’ ಎಂದು ಎನ್‌ಎಚ್‌ಎಸ್‌ನ ಬ್ಲಡ್‌ ಆ್ಯಂಡ್‌ ಟ್ರಾನ್ಸ್‌ಪ್ಲಾಂಟ್‌ ವಿಭಾಗದ ಕನ್ಸಲ್ಟಂಟ್ ಹಿಮಟಾಲಾಜಿಸ್ಟ್‌ ರೇಖಾ ಆನಂದ್‌ ಹೇಳಿದರು.

ಏಷ್ಯಾ ಮೂಲದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಾದ ಲಂಡನ್‌, ಬರ್ಮಿಂಗ್‌ಹ್ಯಾಮ್, ಲೀಸೆಸ್ಟರ್‌, ಮ್ಯಾಂಚೆಸ್ಟರ್‌ ಮತ್ತಿತರ ಕಡೆಗಳಲ್ಲಿ ಪ್ಲಾಸ್ಮಾ ದಾನಿಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT