ಲಂಡನ್ (ಪಿಟಿಐ): ಬ್ರಿಟನ್ ಪ್ರಧಾನಿ ಅಭ್ಯರ್ಥಿಗಳೊಂದಿಗಿನ ಚುನಾವಣಾ ಚರ್ಚೆಯ ವೇಳೆ ಟಿವಿ ನಿರೂಪಕಿ ಪ್ರಜ್ಞೆತಪ್ಪಿ ಬಿದ್ದ ಪರಿಣಾಮ, ರಿಷಿ ಸುನಕ್ ಅರ್ಧಕ್ಕೆ ಚರ್ಚೆ ನಿಲ್ಲಿಸಿ ನಿರೂಪಕಿಯ ನೆರವಿಗೆ ಧಾವಿಸಿದ ಪ್ರಸಂಗ ನಡೆಯಿತು.
ಕನ್ಸರ್ವೇಟಿವ್ ಪಕ್ಷದ ನಾಯಕಿಯಾಗಿ ಆಯ್ಕೆಯಾದರೆ ಜಾರಿಗೊಳಿಸಲಿರುವ ಆರ್ಥಿಕ ಯೋಜನೆಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದವಿದೇಶಾಂಗ ಸಚಿವೆ ಲಿಜ್ ಟ್ರಸ್ ಅವರು, ನಿರೂಪಕಿ ಕುಸಿದುಬಿದ್ದ ದೃಶ್ಯ ನೋಡಿ ಗಾಬರಿಬಿದ್ದರು. ಅಭ್ಯರ್ಥಿಗಳಿಬ್ಬರೂ ಮಂಡಿಯೂರಿ ಕುಳಿತು,ನಿರೂಪಕಿಯ ಆರೋಗ್ಯ ಸ್ಥಿತಿ ವಿಚಾರಿಸಿದರು.
‘ದಿ ಸನ್’ ಮತ್ತು ‘ಟಾಕ್ ಟಿ.ವಿ’ ಜಂಟಿಯಾಗಿ ಮಂಗಳವಾರ ಸಂಜೆ ಈ ಚರ್ಚೆ ಆಯೋಜಿಸಿದ್ದವು. ಚರ್ಚೆ ನಡೆಸಿಕೊಡುತ್ತಿದ್ದನಿರೂಪಕಿ ಕೇಟ್ ಮೆಕೆನ್ ಅನಾರೋಗ್ಯಕ್ಕೊಳಗಾದ ನಂತರ, 30 ನಿಮಿಷ ಕಾಲ ಕಾರ್ಯಕ್ರಮ ಸ್ಥಗಿತವಾಯಿತು. ಚರ್ಚಾ ಕಾರ್ಯಕ್ರಮವನ್ನು ಮತ್ತೊಂದು ಸ್ಟುಡಿಯೊಗೆ ಸ್ಥಳಾಂತರಿಸಬೇಕಾಗಿದ್ದರಿಂದ ತೆರೆಯ ಹಿಂದೆ ನಡೆದ ಈ ಘಟನೆಯ ದೃಶ್ಯಗಳನ್ನು ಚಾನೆಲ್ ಪ್ರಸಾರ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.