ಸೋಮವಾರ, ಮಾರ್ಚ್ 27, 2023
22 °C

ಅಕ್ರಮ ವಲಸೆ ತಡೆಗೆ ಕಠಿಣ ಕಾಯ್ದೆ –ರಿಷಿ ಸುನಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್ (ಪಿಟಿಐ): ಕಡಲಿನ ಮಾರ್ಗದಲ್ಲಿ ದೇಶಕ್ಕೆ ಅಕ್ರಮವಾಗಿ ವಲಸೆ ಬರುವ ಪಿಡುಗಿಗೆ ಕಡಿವಾಣ ಹಾಕಲು ಕಠಿಣ ಕಾಯ್ದೆಯನ್ನು ರೂಪಿಸಲಾಗುವುದು ಎಂದು ಬ್ರಿಟನ್‌ನ ಪ್ರಧಾನಿ ರಿಷಿ ಸುನಕ್‌ ಭಾನುವಾರ ಹೇಳಿದ್ದಾರೆ.

ಫ್ರಾನ್ಸ್ ಸೇರಿದಂತೆ ನೆರೆ ದೇಶಗಳ ಮೂಲಕ ಅಕ್ರಮವಾಗಿ ಒಳನುಸುಳಲು ಇರುವ ಮಾರ್ಗಗಳನ್ನು ಗುರುತಿಸಲಾಗಿದೆ. ಅಕ್ರಮ ವಲಸೆ ತಡೆಗೆ ಮುಂದಿನ ವಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಲಿದ್ದು, ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೇವರ್‌ಮನ್‌ ಜೊತೆ ಚರ್ಚಿಸಲಾಗಿದೆ ಎಂದರು.

‘ನೀವು ಯಾವುದೇ ತಪ್ಪು ಮಾಡದಿರಿ, ಆದರೆ ಇಲ್ಲಿಗೆ ಅಕ್ರಮವಾಗಿ ಬಂದರೆ ನಿಮಗೆ ಇಲ್ಲಿರಲು ಜಾಗವಿಲ್ಲ. ಅಕ್ರಮ ವಲಸೆ ತಡೆಯುವುದು ನನ್ನ ಉನ್ನತ ಐದು ಆದ್ಯತೆಗಳಲ್ಲಿ ಒಂದಾಗಿದೆ’ ಎಂದು ಸ್ಥಳೀಯ ‘ಸಂಡೆ ಎಕ್ಸ್‌ಪ್ರೆಸ್‌’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು