ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ವಿಶ್ವಸಂಸ್ಥೆ ಕಚೇರಿಯ ಕಾಂಪೌಂಡ್ ಮೇಲೆ ದಾಳಿ: ಗುಟೆರಸ್ ಖಂಡನೆ

ಅಕ್ಷರ ಗಾತ್ರ

ನ್ಯೂಯಾರ್ಕ್:‌ಅಫ್ಗಾನಿಸ್ತಾನದ ಹೆರಾತ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿಯ ಕಾಂಪೌಂಡ್‌ ಮೇಲೆ ನಡೆದ ದಾಳಿಯನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌‌ ಖಂಡಿಸಿದ್ದಾರೆ.

ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಗುಟೆರಸ್‌‌ ಹಾರೈಸಿದ್ದಾರೆ ಎಂದು ಅವರ ಉಪವಕ್ತಾರ ಫರ್ಹಾನ್‌ ಹಕ್‌ ಹೇಳಿದ್ದಾರೆ.

ʼಹೆರಾತ್‌ನಲ್ಲಿರುವ ವಿಶ್ವಸಂಸ್ಥೆ ಕಚೇರಿಯ ಕಾಂಪೌಂಡ್‌ ಮೇಲೆ ನಡೆದ ದಾಳಿಯನ್ನು ಮಹಾಪ್ರಧಾನ ಕಾರ್ಯದರ್ಶಿ ಬಲವಾಗಿ ಖಂಡಿಸಿದ್ದಾರೆ. ದಾಳಿ ಸಂದರ್ಭ ಅಫ್ಗಾನ್ ರಕ್ಷಣಾ ಪಡೆಯ ಯೋಧ ಹುತಾತ್ಮರಾಗಿದ್ದು, ಕೆಲವು ಅಧಿಕಾರಿಗಳು ಗಾಯಗೊಂಡಿದ್ದಾರೆ. ಗುಟೆರಸ್‌‌ ಅವರು ಮೃತ ಯೋಧನಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಗಾಯಗೊಂಡಿರುವವರುಬೇಗನೆ ಚೇತರಿಸಿಕೊಳ್ಳುವಂತೆಪ್ರಾರ್ಥಿಸಿದ್ದಾರೆʼ ಎಂದು ಹಕ್‌ ಹೇಳಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತು ಆವರಣದ ಮೇಲೆ ದಾಳಿ ನಡೆಸುವುದನ್ನು ಅಂತರಾಷ್ಟ್ರೀಯಕಾನೂನಿನಡಿ ನಿಷೇಧಿಸಲಾಗಿದೆ.ಇದನ್ನು ಯುದ್ಧ ಅಪರಾಧವೆಂದು ಪರಿಗಣಿಸಲಾಗುವುದು ಎಂದು ಎಚ್ಚರಿಸಿರುವ ಗುಟೆರಸ್‌‌, ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ನೆಲೆಗೊಳಿಸಲು ಶ್ರಮಿಸುತ್ತಿರುವ ಸರ್ಕಾರವನ್ನು ಬೆಂಬಲಿಸಲು ವಿಶ್ವಸಂಸ್ಥೆಯು ಬದ್ಧವಾಗಿದೆಎಂದಿರುವುದಾಗಿಯೂ ಹಕ್‌ ತಿಳಿಸಿದ್ದಾರೆ.

ತಾಲಿಬಾನ್‌ ಉಗ್ರರುಈ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಸಂಘಟನೆ ಮಾತ್ರ ಈವರೆಗೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT