ಲಸಿಕೆ ಪೂರೈಕೆ: ಕಾನೂನು ಅಂಶಗಳ ಪರಿಶೀಲನೆಗೆ ಸಮಯ ಕೇಳಿದ ಭಾರತ- ಅಮೆರಿಕ ಹೇಳಿಕೆ

ವಾಷಿಂಗ್ಟನ್: ವಿದೇಶಿ ಕೋವಿಡ್ ಲಸಿಕೆ ದೇಣಿಗೆಯನ್ನು ಸ್ವೀಕರಿಸುವುದಕ್ಕೆ ಮೊದಲಾಗಿ ಕಾನೂನು ಅಂಶಗಳನ್ನು ಪರಿಶೀಲಿಸಲು ಇನ್ನಷ್ಟು ಸಮಯ ಬೇಕಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ. ಅಲ್ಲಿಂದ ಹಸಿರು ನಿಶಾನೆ ದೊರೆತ ತಕ್ಷಣ ಲಸಿಕೆ ಕಳುಹಿಸಿಕೊಡಲಾಗುವುದು ಎಂದು ಅಮೆರಿಕ ಮಂಗಳವಾರ ತಿಳಿಸಿದೆ.
‘ಬೈಡನ್ ಆಡಳಿತವು ಭಾರತ ಸಹಿತ ಜಗತ್ತಿನ ಹಲವು ದೇಶಗಳಿಗೆ 80 ದಶಲಕ್ಷ ಡೋಸ್ ಲಸಿಕೆಯನ್ನು ದೇಣಿಗೆಯಾಗಿ ನೀಡುವ ಪ್ರಕಟಣೆ ನೀಡಿದೆ. ಈಗಾಗಲೇ ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶದಂತಹ ಕೆಲವು ರಾಷ್ಟ್ರಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ ಭಾರತವು ಕೆಲವು ಕಾನೂನು ವಿಷಯಗಳ ಪರಿಶೀಲನೆಗೆ ಸಮಯ ಬೇಕು ಎಂದು ಕೇಳಿದೆ. ಲಸಿಕೆ ಕಳುಹಿಸಿಕೊಡಬಹುದು ಎಂದು ಭಾರತ ಹೇಳಿದ ತಕ್ಷಣ ಲಸಿಕೆ ಪೂರೈಸಲಾಗುವುದು’ ಎಂದು ವಿದೇಶಾಂಗ ವಿಲಾಖೆಯ ವಕ್ತಾರ ನೆಡ್ ಪ್ರೈಸ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.